ADVERTISEMENT

ಬೆಂಗಳೂರು ಅಭಿವೃದ್ಧಿಗೆ ಮೋದಿ ಒಂದು ಪೈಸೆಯೂ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 7:49 IST
Last Updated 21 ಅಕ್ಟೋಬರ್ 2025, 7:49 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ಬೆಂಗಳೂರಿನಲ್ಲಿ ಸುಮಾರು 500 ಕಿ.ಮಿ. ರಸ್ತೆಯನ್ನು ₹4 ಸಾವಿರ ಕೋಟಿ ವೆಚ್ಚದಲ್ಲಿ ವೈಟ್ ಟ್ಯಾಪಿಂಗ್ ಮಾಡಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸುತ್ತಿದ್ದು, ಮುಂದಿನ ವಾರ ಅಂತಿಮಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಗಾಂಧಿ ನಗರ ಕ್ಷೇತ್ರದ ಚಿಕ್ಕಪೇಟೆಯಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಸಮಾರಂಭದಲ್ಲಿ ಅವರು ಮಾತನಾಡಿದರು.

ಈಗಾಗಲೇ ₹1800 ಕೋಟಿ ವೆಚ್ಚದಲ್ಲಿ 82 ರಸ್ತೆ ವೈಟ್ ಟ್ಯಾಪಿಂಗ್ ಗೆ ಯೋಜನೆ ಜಾರಿಯಲ್ಲಿದೆ. ಇದರಲ್ಲಿ 104 ಕಿ.ಮಿ. ಹೊಸ ರಸ್ತೆಯೂ ಸೇರಿದೆ. ಇದಲ್ಲದೇ ₹695 ಕೋಟಿ ವೆಚ್ಚದಲ್ಲಿ 350 ಕಿ.ಮಿ. ರಸ್ತೆ ಗುಂಡಿ ಮುಚ್ಚಲಾಗಿದೆ ಎಂದರು.

ADVERTISEMENT

ಈಗಾಗಲೇ 10 ಸಾವಿರದಷ್ಟು ರಸ್ತೆ ಗುಂಡಿಗಳನ್ನು ಬೆಂಗಳೂರು ನಗರದಲ್ಲಿ ಮುಚ್ಚಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ 20 ಸಾವಿರ ಗುಂಡಿ ಇದ್ದುದನ್ನು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು. ನಾವು ಪ್ರಾಮಾಣಿಕವಾಗಿಯೇ ಬೆಂಗಳೂರು ಅಭಿವೃದ್ದಿಗೆ ಒತ್ತು ನೀಡುತ್ತಿದ್ದೇವೆ ಎಂದರು.

ಬೆಂಗಳೂರು ಅಭಿವೃದ್ದಿಗೆ ಮೋದಿ ಅವರು ಒಂದು ಪೈಸೆ ನೀಡಿಲ್ಲ. ಸಂಸದರೂ ಬೆಂಗಳೂರು ಪ್ರಗತಿ, ತೆರಿಗೆ ಹಂಚಿಕೆ ಅನ್ಯಾಯದ ಬಗ್ಗೆ ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.