ADVERTISEMENT

ಹಳಿ ತಪ್ಪಿದ ಗೂಡ್ಸ್ ರೈಲು: 19 ರೈಲು ಸಂಚಾರದಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2023, 19:13 IST
Last Updated 21 ಏಪ್ರಿಲ್ 2023, 19:13 IST
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮಾರಂಡಹಳ್ಳಿ–ರಾಯಕ್ಕೊಟ್ಟೈ ನಿಲ್ದಾಣಗಳ ನಡುವೆ ಹಳಿ ತಪ್ಪಿರುವ ಗೂಡ್ಸ್ ರೈಲು
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮಾರಂಡಹಳ್ಳಿ–ರಾಯಕ್ಕೊಟ್ಟೈ ನಿಲ್ದಾಣಗಳ ನಡುವೆ ಹಳಿ ತಪ್ಪಿರುವ ಗೂಡ್ಸ್ ರೈಲು   

ಬೆಂಗಳೂರು: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮಾರಂಡಹಳ್ಳಿ–ರಾಯಕ್ಕೊಟ್ಟೈ ನಿಲ್ದಾಣಗಳ(ಬೆಂಗಳೂರು ವಿಭಾಗ) ನಡುವೆ ಗೂಡ್ಸ್‌ ರೈಲೊಂದು ಹಳಿ ತಪ್ಪಿದ್ದು, 19 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

‘ಶುಕ್ರವಾರ ಬೆಳಗಿನ ಜಾವ ಗೂಡ್ಸ್‌ ರೈಲಿನ ಆರು ಬೋಗಿಗಳು ಹಳಿ ತಪ್ಪಿವೆ. ವಿಪತ್ತು ನಿರ್ವಹಣಾ ತಂಡ ಅಪಘಾತ ಪರಿಹಾರ ರೈಲಿನೊಂದಿಗೆ ಸ್ಥಳಕ್ಕೆ ಹೋಗಿ ಪರಿಹಾರ ಕಾಮಗಾರಿ ನಿರ್ವಹಿಸುತ್ತಿದೆ’ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಮಾರ್ಗದ ಎಲ್ಲ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, 11 ರೈಲುಗಳನ್ನು ಬದಲಿ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಆರು ರೈಲುಗಳನ್ನು ಸಂಚಾರ ರದ್ದುಗೊಳಿಸಲಾಗಿದೆ. ಎರಡು ರೈಲುಗಳ ವೇಳಾಪಟ್ಟಿ ಬದಲಿಸಲಾಗಿದೆ’ ಎಂದು ವಿವರಿಸಿದ್ದಾರೆ.

ADVERTISEMENT

ತಿರುನೆಲ್ವೇಲಿ–ದಾದರ್(ರೈಲು ಗಾಡಿ ಸಂಖ್ಯೆ 11022),  ತೂತುಕುಡಿ - ಮೈಸೂರು(16235), ಕಣ್ಣೂರು-ಯಶವಂತಪುರ(16528), ಮೈಲಾಡುತುರೈ-ಮೈಸೂರು(16231), ನಾಗರಕೊಯಿಲ್ - ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್–ಬೆಂಗಳೂರು(17236), ಬೆಂಗಳೂರಿನ ಕೆಎಸ್‌ಆರ್‌ ರೈಲು ನಿಲ್ದಾಣ– ಎರ್ನಾಕುಲಂ(12677), ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್ - ಕಾರೈಕಲ್(16529), ಕೊಯಮತ್ತೂತು–ಮುಂಬೈ(11014), ಕಾರೈಕಲ್‌–ವಿಶ್ವೇಶ್ವರಯ್ಯ ಟರ್ಮಿನಲ್‌(16530), ಎರ್ನಾಕುಲಂ–ಕೆಎಸ್‌ಆರ್‌ ರೈಲು ನಿಲ್ದಾಣ(12678), ಕೆಎಸ್‌ಆರ್‌ ರೈಲು ನಿಲ್ದಾಣ–ನಾಗರಕೊಯಿಲ್‌(17235) ರೈಲುಗಳ ಸಂಚಾರವನ್ನು ಬದಲಿ ಮಾರ್ಗಕ್ಕೆ ವರ್ಗಾಯಿಸಲಾಗಿದೆ.

ಯಶವಂತಪುರ–ಸೇಲಂ(16211), ಸೇಲಂ–ಯಶವಂತಪುರ(16212) ಮತ್ತು ಧರ್ಮಪುರಿ–ಕೆಎಸ್‌ಆರ್‌ ರೈಲು ನಿಲ್ದಾಣ(06278–ಮೆಮು), ಕೆಎಸ್‌ಆರ್‌–ಜೋಲಾರಪೇಟೆ (06551/06552), ಕೆಎಸ್‌ಆರ್‌–ಮೈಸೂರು(06255–ಮೆಮು), ಮೈಸೂರು–ಕೆಎಸ್‌ಆರ್‌(06560–ಮೆಮು) ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಯಶವಂತಪುರ–ಮೈಸೂರು(16207), ಮೈಸೂರು–ತೂತುಕುಡಿ(16236) ರೈಲುಗಳ ಸಂಚಾರದ ಸಮಯ ಬದಲಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.