ADVERTISEMENT

Bengaluru Rains | ನಗರದ ಹಲವೆಡೆ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 0:05 IST
Last Updated 14 ಜುಲೈ 2025, 0:05 IST
<div class="paragraphs"><p>ವಿಧಾನ ಸೌಧದ ಮುಂದೆ ಮಳೆ ನೀರಿನಲ್ಲಿ ನೀರೆಯರ ಆಟ ಗಮನಸೆಳೆಯಿತು</p></div>

ವಿಧಾನ ಸೌಧದ ಮುಂದೆ ಮಳೆ ನೀರಿನಲ್ಲಿ ನೀರೆಯರ ಆಟ ಗಮನಸೆಳೆಯಿತು

   

ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ನಗರದ ಹಲವೆಡೆ ಭಾನುವಾರ ಸಂಜೆ ಬಿರುಸಿನ ಮಳೆ ಆಯಿತು. ಒಂದು ಕಡೆ ಮರ, ಎರಡು ಕಡೆ ಮರೆದ ರೆಂಬೆಗಳು ಮುರಿದು ಬಿದ್ದಿವೆ.

ADVERTISEMENT

ಚಾಮರಾಜನಗರದ 7ನೇ ಅಡ್ಡರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ತೊಡಕುಂಟಾಯಿತು. ಇಂದಿರಾನಗರ ಮತ್ತು ಜಯನಗರ ನಾಲ್ಕನೇ 1ಇ ಬ್ಲಾಕ್‌ನಲ್ಲಿ ಮರದ ಕೊಂಬೆ ರಸ್ತೆ ಮೇಲೆ ಬಿದ್ದಿದ್ದರಿಂದ ಕೆಲಹೊತ್ತು ರಸ್ತೆ ಬಂದ್‌ ಆಯಿತು.

ಮಣಿಪಾಲ್ ಸೆಂಟರ್ ಜಂಕ್ಷನ್‌ ಬಳಿ ನೀರು ನಿಂತಿದ್ದರಿಂದ ಕಬ್ಬನ್ ರಸ್ತೆ ಕಡೆಗೆ ಸಂಚರಿಸುವ ವಾಹನಗಳಿಗೆ ಅಡ್ಡಿಯಾಯಿತು. ಪ್ಯಾಲೆಸ್‌ ಕ್ರಾಸ್‌ನಿಂದ ಪಿ.ಜಿ. ಹಳ್ಳಿ ಕಡೆಗೆ ಹೋಗುವ ರಸ್ತೆ, ಕೆಳ ಸೇತುವೆಯಿಂದ ಜಯಮಹಲ್ ಕಡೆಗಿನ ರಸ್ತೆ, ಖೋಡೆ ವೃತ್ತದ ಕೆಳಸೇತುವೆ, ವಿಂಡ್ಸರ್‌ ಮ್ಯಾನರ್ ಬಳಿ ರಸ್ತೆಗಳಲ್ಲಿಯೇ ನೀರು ನಿಂತಿದ್ದರಿಂದ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.

ಮಳೆ ಪ್ರಮಾಣ: ಎಚ್‌ಎಎಲ್ ವಿಮಾನ ನಿಲ್ದಾಣ 3.2 ಸೆಂ.ಮೀ., ಬಿಳೇಕಹಳ್ಳಿ 2.5 ಸೆಂ.ಮೀ., ಸಂಪಂಗಿರಾಮನಗರ 2.1 ಸೆಂ.ಮೀ., ಕಾಟನ್‌ ಪೇಟೆ 2 ಸೆಂ.ಮೀ., ಮಾರತ್‌ಹಳ್ಳಿ 1.6 ಸೆಂ.ಮೀ., ಹೆರೋಹಳ್ಳಿ 1.6 ಸೆಂ.ಮೀ., ಹಂಪಿನಗರ 1.6 ಸೆಂ.ಮೀ., ವನ್ನಾರ್‌ಪೇಟೆ 1.5 ಸೆಂ.ಮೀ., ಚಾಮರಾಜಪೇಟೆ 1.4 ಸೆಂ.ಮೀ., ಮಾರುತಿ ಮಂದಿರ 1.3 ಸೆಂ.ಮೀ., ಬೊಮ್ಮನಹಳ್ಳಿ 1.2 ಸೆಂ.ಮೀ., ದಯಾನಂದ ನಗರ 1.2 ಸೆಂ.ಮೀ., ನಾಗಪುರ 1.2 ಸೆಂ.ಮೀ., ಅರಕೆರೆ 1.1 ಸೆಂ.ಮೀ., ಕೊಟ್ಟಿಗೆಪಾಳ್ಯ 1.1 ಸೆಂ.ಮೀ., ವಿಶ್ವೇಶ್ವರಪುರ 1.1 ಸೆಂ.ಮೀ., ಹಗದೂರು 1 ಸೆಂ.ಮೀ., ರಾಜಾಜಿನಗರದಲ್ಲಿ 1 ಸೆಂ.ಮೀ. ಮಳೆ ದಾಖಲಾಗಿದೆ.

ನಗರದಲ್ಲಿ ಭಾನುವಾರ ಸಂಜೆ ಮಳೆ ಸುರಿಯುತ್ತಿರುವಾಗ ವಿಧಾನ ಸೌಧದ ಮುಂದೆ ಯುವಕನೊಬ್ಬ ಜಿಗಿದು ಸಂಭ್ರಮಿಸಿದ್ದು ಕಂಡು ಬಂತು  ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.