ADVERTISEMENT

ಇದು ಬೆಂಗಳೂರು.. ಕನ್ನಡ ಅಲ್ಲ, ಹಿಂದಿ ಮಾತನಾಡು: ಆಟೊ ಚಾಲಕನಿಗೆ ಯುವಕನ ದರ್ಪ

ಈ ಕುರಿತ ವಿಡಿಯೊ ಜಾಲತಾಣಗಳಲ್ಲಿ ಹರಿದಾಡಿದೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2025, 7:00 IST
Last Updated 20 ಏಪ್ರಿಲ್ 2025, 7:00 IST
<div class="paragraphs"><p>ಆಟೊ ಚಾಲಕನಿಗೆ ಯುವಕನ ದರ್ಪ</p></div>

ಆಟೊ ಚಾಲಕನಿಗೆ ಯುವಕನ ದರ್ಪ

   

ಬೆಂಗಳೂರು: ಭಾಷೆಯ ವಿಚಾರವಾಗಿ ಯುವಕನೊಬ್ಬ ಬೆಂಗಳೂರಿನಲ್ಲಿ ಆಟೊ ಚಾಲಕನ ಜೊತೆ ಜಗಳ ತೆಗೆದಿರುವ ಘಟನೆ ನಡೆದಿದೆ.

ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಯುವಕನ ವರ್ತನೆಗೆ ಕನ್ನಡಿಗರು ಕಿಡಿಕಾರಿದ್ದಾರೆ.

ADVERTISEMENT

ಹಳೆ ಏರ್ಪೋರ್ಟ್ ರಸ್ತೆಯ ಮುರುಗೇಶನಪಾಳ್ಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಆಟೊ ಚಾಲನೊಂದಿಗೆ ಯಾವುದೊ ವಿಚಾರಕ್ಕೆ ಜಗಳ ತೆಗೆದಿದ್ದ ಅನ್ಯ ರಾಜ್ಯದ ಯುವಕ ‘ಇದು ಬೆಂಗಳೂರು ಇರಬಹುದು, ಕನ್ನಡ ಅಲ್ಲ, ನೀನು ಹಿಂದಿ ಮಾತನಾಡು’ ಎಂದು ಆಟೊ ಚಾಲಕನ ಎದುರು ದುರಹಂಕಾರ ಪ್ರದರ್ಶಿಸಿದ್ದಾನೆ.

ಇದಕ್ಕೆ ಆಟೊ ಚಾಲಕ, ‘ನೀನು ಬೆಂಗಳೂರಿಗೆ ಬಂದಿರುವುದು ನೀನು ಕನ್ನಡ ಮಾತನಾಡು’ ಎಂದು ತಿರುಗೇಟು ನೀಡಿದ್ದಾರೆ.

ಆಟೊ ಚಾಲಕ ಮಾಡಿಕೊಂಡಿರುವ ಈ ವಿಡಿಯೊ ಸಾಕಷ್ಟು ಗಮನ ಸೆಳೆದಿದ್ದು ಅನೇಕ ನೆಟ್ಟಿಗರು ಯವಕನ ವರ್ತನೆಯನ್ನು ಖಂಡಿಸಿದ್ದಾರೆ. ಬೆಂಗಳೂರಿನಲ್ಲಿ ಮೇಲಿಂದ ಮೇಲೆ ಹಿಂದಿ ಭಾಷಿಕರ ಹಾವಳಿ ಹೆಚ್ಚುತ್ತಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.