ADVERTISEMENT

ಬೆಂಗಳೂರು ಧರ್ಮರಾಯ ‌ಸ್ವಾಮಿ ಕರಗ: ಕರ್ಪೂರ ಬೆಂಕಿ ಶಾಖಕ್ಕೆ ಬೈಕ್‌ಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2023, 12:36 IST
Last Updated 6 ಏಪ್ರಿಲ್ 2023, 12:36 IST
   

ಬೆಂಗಳೂರು: ತಿಗಳರಪೇಟೆಯ ಧರ್ಮರಾಯ ‌ಸ್ವಾಮಿ ದೇವಾಲಯದ ಆವರಣದಲ್ಲಿ ಹಚ್ಚಲಾಗಿದ್ದ ದೊಡ್ಡ ಗಾತ್ರದ ಕರ್ಪೂರದ ಶಾಖದಿಂದಾಗಿ 10 ವಾಹನಗಳಿಗೆ ಹಾನಿಯಾದೆ.

ದೇವಸ್ಥಾನದ ಆವರಣದಲ್ಲಿ ಪ್ರತಿ ವರ್ಷವೂ ಭಕ್ತರು ದೊಡ್ಡ ಗಾತ್ರದ ಕರ್ಪೂರಗಳನ್ನಿಟ್ಟು ಬೆಂಕಿ ಹಚ್ಚುತ್ತಾರೆ. ಈ ಸಂದರ್ಭದಲ್ಲಿ ಅಕ್ಕ–ಪಕ್ಕದಲ್ಲಿ ಯಾವುದೇ ವಾಹನ ನಿಲ್ಲಿಸದಂತೆ ದೇವಸ್ಥಾನದವರು ಎಚ್ಚರಿಕೆ ನೀಡುತ್ತಾರೆ. ಅಷ್ಟಾದರೂ ಗುರುವಾರ ಹಲವರು ತಮ್ಮ ವಾಹನಗಳನ್ನು ದೇವಸ್ಥಾನ ಬಳಿಯ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದರು.

ಆವರಣದಲ್ಲಿ ಸೇರಿದ್ದ ಭಕ್ತರು, ಕರ್ಪೂರ ಹಚ್ಚಿದ್ದರು. ಕರ್ಪೂರದಿಂದ ಬೆಂಕಿ ಹೊತ್ತಿಕೊಂಡು ಧಗ ಧಗ ಉರಿಯಲಾರಂಭಿಸಿತ್ತು. ಇದರ ಶಾಖ ರಸ್ತೆಯ ಪಕ್ಕದಲ್ಲಿದ್ದ ವಾಹನಗಳಿಗೆ ತಾಗಿತ್ತು. ಇದರಿಂದಾಗಿ, ಬೈಕ್‌ಗಳಿಗೆ ಹಾನಿಯಾಗಿದೆ.

ADVERTISEMENT

‘ಬೆಂಕಿಯ ಶಾಖದಿಂದ ಬೈಕ್‌ಗಳಿಗೆ ಹಾನಿಯಾಗಿದೆ. ಯಾವ ಬೈಕ್‌ಗೂ ಬೆಂಕಿ ಹೊತ್ತಿಕೊಂಡಿಲ್ಲ. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.