ADVERTISEMENT

ಬೆಂಗಳೂರು: ₹40 ಕೋಟಿ ಮೌಲ್ಯದ ಜಮೀನು ಮರುವಶ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 22:35 IST
Last Updated 29 ಜುಲೈ 2024, 22:35 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಲೊಟ್ಟೆಗೊಲ್ಲಹಳ್ಳಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಶೆಡ್‌ಗಳನ್ನು ತೆರವು ಗೊಳಿಸಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ₹40 ಕೋಟಿ ಮೌಲ್ಯದ ತನ್ನ ಜಮೀನನ್ನು ಮರುವಶಕ್ಕೆ ತೆಗೆದುಕೊಂಡಿದೆ.

ಲೊಟ್ಟೆಗೊಲ್ಲಹಳ್ಳಿ ಗ್ರಾಮದ ಸರ್ವೆ ನಂ. 10/1, 10/11ಎಫ್1 ಮತ್ತು 10/11ಎಫ್2 ರಲ್ಲಿ ಒಂದು ಗೋಡೌನ್, 15 ಶೆಡ್‌ಗಳು ಮತ್ತು ಎರಡು ಕಾರು ಗ್ಯಾರೇಜ್‌ಗಳು ಅಕ್ರಮವಾಗಿ ನಿರ್ಮಾಣವಾಗಿ
ದ್ದವು.  ಇವುಗಳನ್ನು ಸೋಮವಾರ ತೆರವುಗೊಳಿಸಿದ ಬಿಡಿಎ, 32 ಗುಂಟೆ ಪ್ರದೇಶವನ್ನು ವಶಕ್ಕೆ ಪಡೆಯಿತು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.