ADVERTISEMENT

Bengaluru Metro: ಮೆಟ್ರೊ ಹಳಿಗೆ ಹಾರಿದ ವ್ಯಕ್ತಿಯ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 6:44 IST
Last Updated 20 ಜನವರಿ 2025, 6:44 IST
<div class="paragraphs"><p>ಮೆಟ್ರೊ </p></div>

ಮೆಟ್ರೊ

   

ಬೆಂಗಳೂರು: ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಜಾಲಹಳ್ಳಿ ನಿಲ್ದಾಣದಲ್ಲಿ ಸೋಮವಾರ ಬಿಹಾರದ ವ್ಯಕ್ತಿ ಹಳಿಗೆ ಹಾರಿದ್ದು, ಮೆಟ್ರೊ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇದರಿಂದ 25 ನಿಮಿಷ ಮೆಟ್ರೊ ಸಂಚಾರ ವ್ಯತ್ಯಯ ಉಂಟಾಯಿತು.

ಅನಿಲ್ ಕುಮಾರ್ ಪಾಂಡೆ (49) ಹಳಿಗೆ ಹಾರಿದವರು.

ADVERTISEMENT

ಬೆಳಿಗ್ಗೆ 10.25ಕ್ಕೆ ಮೆಟ್ರೊ ರೈಲು ಜಾಲಹಳ್ಳಿ ನಿಲ್ದಾಣಕ್ಕೆ ಬರುವ ವೇಳೆ ಪಾಂಡೆ ಹಾರಿದ್ದರು. ಕೂಡಲೇ ಸಿಬ್ಬಂದಿ ಇಟಿಎಸ್ (ಎಮರ್ಜನ್ಸಿ ಟ್ರಿಪ್ ಸಿಸ್ಟಮ್) ಆಫ್ ಮಾಡಿ ಮೆಟ್ರೊ ಸಂಚಾರ ಸ್ಥಗಿತಗೊಳಿಸಿದರು. ಪಾಂಡೆಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರು. ಪಾಂಡೆಗೆ ಸಣ್ಣ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಈ ಘಟನೆಯಿಂದ 10.25ರಿಂದ ಮೆಟ್ರೊ 10.50ರ ವರೆಗೆ ಸಂಚಾರ ವ್ಯತ್ಯಯ ಆಯಿತು.

ಹಳಿಗೆ ಹಾರಲು ಕಾರಣ ಏನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬಿಎಂ ಆರ್ ಸಿ ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.