ADVERTISEMENT

ಹೆರಿಗೆ ಆಸ್ಪತ್ರೆಗಳ ಮೇಲ್ದರ್ಜೆಗೆ ₹310 ಕೋಟಿ: 18 ತಿಂಗಳಲ್ಲಿ ಕಾಮಗಾರಿ ಪೂರ್ಣ?

ಐಪಿಎಚ್‌ಎಸ್‌–2022ರಂತೆ ಜಿಬಿಎಯಿಂದ ಅಭಿವೃದ್ಧಿ

ಆರ್. ಮಂಜುನಾಥ್
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಜಿಬಿಎ ವ್ಯಾಪ್ತಿಯ ನಾಲ್ಕು ನಗರ ಪಾಲಿಕೆಗಳಲ್ಲಿರುವ 21 ಹೆರಿಗೆ ಹಾಗೂ ರೆಫರಲ್‌ ಆಸ್ಪತ್ರೆಗಳನ್ನು ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳಿಗೆ (ಐಪಿಎಚ್‌ಎಸ್‌–2022) ಅನುಸಾರವಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ.

ಹೆರಿಗೆ/ ರೆಫರಲ್‌ ಆಸ್ಪತ್ರೆಗಳಲ್ಲಿ ವೈದ್ಯಕೀಯ ಉಪಕರಣ, ವೈದ್ಯಕೀಯ ಗ್ಯಾಸ್ ಕೊಳವೆ ಮಾರ್ಗ, ಅಗ್ನಿಶಾಮಕ ವ್ಯವಸ್ಥೆ, ವಿದ್ಯುತ್‌ ಮತ್ತು ಇತರೆ ಅಗತ್ಯ ವ್ಯವಸ್ಥೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಇದಕ್ಕಾಗಿ ₹310 ಕೋಟಿ ವೆಚ್ಚ ಮಾಡಲಾಗುತ್ತಿದೆ.

ADVERTISEMENT

21 ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು 18 ತಿಂಗಳಲ್ಲಿ ತಿಂಗಳಲ್ಲಿ ಮುಗಿಸಲು ನಿರ್ಧರಿಸಲಾಗಿದೆ. ಜಿಬಿಎ ಯೋಜನಾ ಅನುಷ್ಠಾನ ವಿಭಾಗದ ಕಾರ್ಯಕಾರಿ ಎಂಜಿನಿಯರ್‌–4 ಅವರು ಯೋಜನೆಯನ್ನು ನಿರ್ವಹಿಸಲಿದ್ದಾರೆ.

ಐಪಿಎಚ್‌ಎಸ್‌–2022ರ ಪ್ರಕಾರ ಯಾವ ರೀತಿ ಕಟ್ಟಡ ನಿರ್ಮಾಣ ಮಾಡಬೇಕೆಂಬ ನೀಲನಕ್ಷೆಯನ್ನೂ ಸಿದ್ಧಪಡಿಸಲಾಗಿದ್ದು, ಅದರಂತೆಯೇ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಟೆಂಡರ್‌ ಆಹ್ವಾನಿಸಲಾಗಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದರು.

ಏನೇನು ಷರತ್ತು: ಹೆರಿಗೆಗೆ ಸಂಬಂಧಿಸಿದ ಎಲ್ಲ ರೀತಿಯ ಉಪಕರಣಗಳು ಆಸ್ಪತ್ರೆಗೆ ಸರಬರಾಜಾದ ಎಂಟು ವಾರದಲ್ಲಿ ಕಾರ್ಯಾಚರಣೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಇದಕ್ಕೆಲ್ಲ ಐಎಸ್‌ಒ 9001 ಮತ್ತು ಐಎಸ್‌ಒ 13485 ಪ್ರಮಾಣ ಪತ್ರವಿರಬೇಕು.

ಆಸ್ಪತ್ರೆಗಳಿಗೆ ಒದಗಿಸುವ ಎಲ್ಲ ಉತ್ಪನ್ನಗಳು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ಪ್ರಮಾಣಪತ್ರ ಹೊಂದಿರುವ ಉಪಕರಣಗಳನ್ನೇ ಬಳಸಬೇಕು. ಉಪಕರಣಗಳನ್ನು ಆಮದು ಮಾಡಿಕೊಂಡರೆ, ಯುರೋಪಿಯನ್‌ ಕಮಿಷನ್‌/ ಎಫ್‌ಡಿಎ (ಯುಎಸ್‌)/ ಬಿಐಎಸ್‌/ ಪ್ರಮಾಣ ಪತ್ರವನ್ನು ಹೊಂದಿರಬೇಕು. ಸುರಕ್ಷತಾ ಪ್ರಮಾಣ ಪತ್ರವನ್ನೂ ಒಳಗೊಂಡಿರಬೇಕು. ಉಪಕರಣಗಳು ಕಾರ್ಯಾರಂಭಿಸಿದ ದಿನದಿಂದ ಎರಡು ವರ್ಷ ವಾರಂಟಿ ಅವಧಿಯೂ ಇರಬೇಕು ಎಂಬ ಷರತ್ತು ವಿಧಿಸಲಾಗಿದೆ.‌

ಯಾವ ಆಸ್ಪತ್ರೆಗಳ ಅಭಿವೃದ್ಧಿ...

ಬೆಂಗಳೂರು ಕೇಂದ್ರ ನಗರ ಪಾಲಿಕೆ: ಹಲಸೂರು ರೆಫರಲ್‌ ಆಸ್ಪತ್ರೆ, ಆಸ್ಟಿನ್‌ ಟೌನ್‌ ಹೆರಿಗೆ ಆಸ್ಪತ್ರೆ, ಕಾಕ್ಸ್‌ ಟೌನ್‌ ಹೆರಿಗೆ ಆಸ್ಪತ್ರೆ, ಜಯನಗರ ಹೆರಿಗೆ ಆಸ್ಪತ್ರೆ, ತಿಮ್ಮಯ್ಯ ರಸ್ತೆ ಹೆರಿಗೆ ಆಸ್ಪತ್ರೆ, ಮಾಗಡಿ ರಸ್ತೆ ಹೆರಿಗೆ ಆಸ್ಪತ್ರೆ, ‌ಗವಿಪುರ ಗುಟ್ಟಹಳ್ಳಿ ಹೆರಿಗೆ ಆಸ್ಪತ್ರೆ, ಎಚ್‌. ಸಿದ್ದಯ್ಯ ರಸ್ತೆ ರೆಫರಲ್‌ ಆಸ್ಪತ್ರೆ, ವಿಲ್ಸನ್‌ ಗಾರ್ಡನ್‌ 
ಹೆರಿಗೆ ಆಸ್ಪತ್ರೆ.

ಬೆಂಗಳೂರು ಉತ್ತರ ನಗರ ಪಾಲಿಕೆ: ಡಿ.ಜೆ. ಹಳ್ಳಿ ಹೆರಿಗೆ ಆಸ್ಪತ್ರೆ, ಎಂ.ಆರ್‌. ಪಾಳ್ಯ ಹೆರಿಗೆ ಆಸ್ಪತ್ರೆ,
ಯಶವಂತಪುರ ಆಸ್ಪತ್ರೆ.

ಬೆಂಗಳೂರು ದಕ್ಷಿಣ ನಗರ ಪಾಲಿಕೆ: ತಾವರೆಕೆರೆ/ ಈಜಿಪುರ ಹೆರಿಗೆ ಆಸ್ಪತ್ರೆ.

ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ನಂದಿನಿ ಲೇಔಟ್‌ ಹೆರಿಗೆ ಆಸ್ಪತ್ರೆ, ಶ್ರೀರಾಮಪುರ ರೆಫರಲ್‌ ಆಸ್ಪತ್ರೆ, ಪ್ಯಾಲೇಸ್‌ ಗುಟ್ಟಹಳ್ಳಿ ಹೆರಿಗೆ ಆಸ್ಪತ್ರೆ, ಮೂಡಲಪಾಳ್ಯ ಹೆರಿಗೆ ಆಸ್ಪತ್ರೆ, ಎಂ.ಸಿ. ಲೇಔಟ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಎನ್‌.ಆರ್‌. ಕಾಲೊನಿ ಹೆರಿಗೆ ಆಸ್ಪತ್ರೆ, ಆಜಾದ್‌ನಗರ ಹೆರಿಗೆ ಆಸ್ಪತ್ರೆ, ಹೊಸಕೆರೆಹಳ್ಳಿ ರೆಫರಲ್‌ ಆಸ್ಪತ್ರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.