(ಸಾಂದರ್ಭಿಕ ಚಿತ್ರ)
ಬೆಂಗಳೂರು: ಮೈಸೂರು ರಸ್ತೆಯ ಬಾಪೂಜಿ ನಗರದಲ್ಲಿ ಭಾನುವಾರ ರಾತ್ರಿ ಸ್ನೇಹಿತರ ನಡುವೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿದೆ.
ಕೌಶಿಕ್ (26) ಎಂಬುವರನ್ನು ಕೊಲೆ ಮಾಡಲಾಗಿದೆ.
ಸ್ನೇಹಿತನೇ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಬಾಪೂಜಿ ನಗರದ ಕೌಶಿಕ್ ಅವರು ಕೋಲಾರದಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಬಾಪೂಜಿ ನಗರದ ಮನೆಗೆ ಬಂದಿದ್ದರು. ಸ್ನೇಹಿತರಾದ ಚಂದನ್ ಮತ್ತು ಮನೋಹರ್ ಜತೆ ಹೊರಗೆ ಹೋಗಿದ್ದಾಗ ಕೊಲೆಯಾಗಿದೆ ಎಂದು ಪೊಲೀಸರು ಹೇಳಿದರು.
‘ಹೊರಗೆ ಹೋಗಿದ್ದ ವೇಳೆ ಮೂವರೂ ಮದ್ಯಪಾನ ಮಾಡಿದ್ದರು. ಈ ವೇಳೆ ಕೌಶಿಕ್ ಅವರು ಚಂದನ್ ಹಾಗೂ ಕೌಶಿಕ್‌ಗೆ ನಿಂದಿಸಿದ್ದರು. ಸಿಟ್ಟಿಗೆದ್ದ ಇಬ್ಬರೂ, ಕೌಶಿಕ್ ಅವರ ತಲೆಗೆ ಬಿಯರ್ ಬಾಟಲಿನಿಂದ ಹೊಡೆದಿದ್ದರು. ಜತೆಗೆ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಕೊಲೆ ನಂತರ ಆರೋಪಿಗಳು ಪರಾರಿಯಾಗಿದ್ದರು. ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಬ್ಬರೂ ಬಾಪೂಜಿ ನಗರ ನಿವಾಸಿಗಳು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.