ADVERTISEMENT

ಮೊಬೈಲ್‌ ಕಳ್ಳನ ಬೆನ್ನಟ್ಟಿ ಹಿಡಿದ ಪೊಲೀಸ್‌

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 19:09 IST
Last Updated 20 ಜನವರಿ 2024, 19:09 IST
   

ಬೆಂಗಳೂರು: ಮತ್ತಿಕೆರೆ ಬಸ್ ನಿಲ್ದಾಣ ಬಳಿ ಕಳ್ಳನೊಬ್ಬ ಪಾದಚಾರಿಯಿಂದ ಮೊಬೈಲ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದು, ಕಳ್ಳನನ್ನು ಪೊಲೀಸ್‌ ಸಿಬ್ಬಂದಿ ಬೆನ್ನಟ್ಟಿ ಹಿಡಿದಿದ್ಧಾರೆ.

ಯಶವಂತಪುರ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿ ಅನಂತಕುಮಾರ್ ಅವರು ಮತ್ತಿಕೆರೆ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗ ಘಟನೆ ನಡೆದಿದ್ದು, ಕಳ್ಳನನ್ನು ಅನಂತಕುಮಾರ್ ಬೆನ್ನಟ್ಟಿ ಹಿಡಿದು ಯಶವಂತಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT