ADVERTISEMENT

ಬೆಂಗಳೂರಲ್ಲಿ ಫೆ. 3ರಂದು ವಿದ್ಯುತ್‌ ವ್ಯತ್ಯಯ: ಯಾವ್ಯಾವ ಸ್ಥಳಗಳಲ್ಲಿ ಸಮಸ್ಯೆ?

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 21:13 IST
Last Updated 2 ಫೆಬ್ರುವರಿ 2026, 21:13 IST
   

ಬೆಂಗಳೂರು: ಬಾಣಸವಾಡಿಯ 66 ಕೆ.ವಿ. ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಕಾರಣ ಫೆ. 3ರಂದು (ಮಂಗಳವಾರ) ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. 

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಎಚ್ಆರ್‌ಬಿಆರ್‌ ಲೇಔಟ್ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, ಸರ್ವೀಸ್ ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಸಿಎಂಆರ್ ರಸ್ತೆ, ಬಾಬುಸಾಪಾಳ್ಯ, ಬಾಲಚಂದ್ರ ಲೇಔಟ್, ಫ್ಲವರ್ ಗಾರ್ಡನ್, ಎಂ.ಎಂ. ಗಾರ್ಡನ್, ಆರ್ಕಾವತಿ ಲೇಔಟ್, ಅಂಜನಾದ್ರಿ ಲೇಔಟ್ ಎನ್‌ಕ್ಲೇವ್‌, ದಿವ್ಯ ಉನ್ನತಿ ಲೇಔಟ್, ವಿಜಯೇಂದ್ರ ಗಾರ್ಡನ್, ಮಲ್ಲಪ್ಪ ಲೇಔಟ್, ಬಾಲಾಜಿ ಲೇಔಟ್, ಜಿಎನ್ಆರ್ ಗಾರ್ಡನ್, ಸುಬ್ಬಯ್ಯನಪಾಳ್ಯ, ಹೊರಮಾವು, ಮುನಿರೆಡ್ಡಿ ಲೇಔಟ್, ವಿಜಯ ಬ್ಯಾಂಕ್ ಕಾಲೊನಿ, ನಿಸರ್ಗ ಕಾಲೊನಿ, ನಂದನಂ ಕಾಲೊನಿ, ಅಮರ್ ಏಜೆನ್ಸಿ ಲೇಔಟ್, ಪಿ ಆ್ಯಂಡ್‌ ಟಿ ಲೇಔಟ್, ಪಪ್ಪಯ್ಯ ಲೇಔಟ್, ಕೊಕೊನಟ್ ಗ್ರೂವ್‌ ಲೇಔಟ್, ಆಶೀರ್ವಾದ್ ಕಾಲೊನಿ, ಶಕ್ತಿ ನಗರ, ಹೆಣ್ಣೂರು ಗ್ರಾಮ, ಭೈರವೇಶ್ವರ ಲೇಔಟ್, ಚಿಕ್ಕಣ್ಣ ಲೇಔಟ್, ಸಿಎಂಆರ್ ಲೇಔಟ್, ಕೆಂಚಪ್ಪ ಗಾರ್ಡನ್, ಬೃಂದಾವನ ಲೇಔಟ್, ಹೊಯ್ಸಳ ನಗರ, ಬೃಂದಾವನ ಅವೆನ್ಯೂ ಹೆರಿಟೇಜ್, ವಿನಾಯಕ ಲೇಔಟ್, ಜಯಂತಿ ಗ್ರಾಮ, ಓಎಂಬಿಆರ್ ಲೇಔಟ್, ಕಸ್ತೂರಿ ನಗರ, ರಾಮಯ್ಯ ಲೇಔಟ್, ದೊಡ್ಡ ಬಾಣಸವಾಡಿ, ರಾಮಮೂರ್ತಿ ನಗರ ಮುಖ್ಯರಸ್ತೆ, ಬಿ. ಚನ್ನಸಂದ್ರ, ನಂಜಪ್ಪ ಗಾರ್ಡನ್, ದೊಡ್ಡಯ್ಯ ಲೇಔಟ್, ಬ್ಯಾಂಕ್ ಅವೆನ್ಯೂ, ಆರ್.ಎಸ್. ಪಾಳ್ಯ, ಎಡಿಎಂಸಿ ಮಿಲಿಟರಿ ಗೇಟ್, ಮುನಿಸ್ವಾಮಿ ರಸ್ತೆ, ಕುಳ್ಳಪ್ಪ ವೃತ್ತ, ರಾಜ್‌ಕುಮಾರ್ ಉದ್ಯಾನ, ಮೇಘನಾ ಪಾಳ್ಯ, ಮುನಿಸ್ವಾಮಪ್ಪ ಲೇಔಟ್, ಬಂಜಾರ ಲೇಔಟ್, ವಿಜಯಲಕ್ಷ್ಮೀ ಲೇಔಟ್, ಸಂಕಲ್ಪ ಲೇಔಟ್, ಗ್ರೀನ್ ಗಾರ್ಡನ್ ಫೇಸ್–2, ಸಮೃದ್ಧಿ ಲೇಔಟ್, ಬೆಥೆಲ್ ಲೇಔಟ್, ಎಸ್ಎಲ್ಎಸ್ ಸ್ಪೆನ್ಸರ್ ಅಪಾರ್ಟ್‌ಮೆಂಟ್ಸ್, ಡಿಎಸ್-ಮ್ಯಾಕ್ಸ್ ಅಪಾರ್ಟ್‌ಮೆಂಟ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT