ADVERTISEMENT

ಬೆಂಗಳೂರು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ನಾಳೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 20:56 IST
Last Updated 24 ಡಿಸೆಂಬರ್ 2025, 20:56 IST
ವಿದ್ಯುತ್ ವ್ಯತ್ಯಯ
ವಿದ್ಯುತ್ ವ್ಯತ್ಯಯ   

ಬೆಂಗಳೂರು: ಕಟ್ಟಿಗೇನಹಳ್ಳಿ 66/11 ಕೆ.ವಿ. ವಿದ್ಯುತ್‌ ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ಡಿ. 26ರಂದು ಬೆಳಿಗ್ಗೆ 10.30ರಿಂದ ಸಂಜೆ 6.30ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯುತ್‌ ವ್ಯತ್ಯಯವಾಗುವ ಸ್ಥಳಗಳು: ಸುಬ್ರಹ್ಮಣ್ಯನಗರ, ಮಿಲ್ಕ್‌ ಕಾಲೊನಿಯ ಎ, ಬಿ, ಸಿ, ಡಿ ಬ್ಲಾಕ್‌, ಗಾಯತ್ರಿನಗರ, ಕೃಷ್ಣಾನಂದ ನಗರ, ಶಂಕರನಗರ, ಶ್ರೀಕಾಂತೇಶ್ವರನಗರ, ಸೋಮೇಶ್ವರನಗರ, ಎಪಿಎಂಸಿ ಯಾರ್ಡ್‌, ಮಹಾಲಕ್ಷ್ಮೀ ಲೇಔಟ್, ಗಣೇಶ ಬ್ಲಾಕ್, ಆಂಜನೇಯ ದೇವಸ್ಥಾನ ರಸ್ತೆ, ಸರಸ್ವತಿಪುರ, ಎಜಿಬಿ ಲೇಔಟ್, ಪರಿಮಳನಗರ, ಶ್ರೀನಿವಾಸನಗರ, ಎ.ಎಸ್. ನಗರ, ಕುರುಬರಹಳ್ಳಿ, ರಾಜ್‌ಕುಮಾರ್‌ ಸಮಾಧಿ ರಸ್ತೆ, ಶ್ರೀರಾಮನಗರ, ಮುನೇಶ್ವರ ಬ್ಲಾಕ್, ಸತ್ಯನಾರಾಯಣ ಲೇಔಟ್, ಸತ್ವ ಮತ್ತು ಸುತ್ತಮುತ್ತಲಿನ ಪ್ರದೇಶಗಳು. 

ಚಂದ್ರಾ ಲೇಔಟ್‌ 66/11ಕೆ.ವಿ. ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ಡಿ. 26ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಲಿಗದೆ. 

ADVERTISEMENT

ವಿದ್ಯುತ್‌ ವ್ಯತ್ಯಯವಾಗುವ ಸ್ಥಳಗಳು: ಆರ್‌ಪಿಸಿ ಲೇಔಟ್, ರೆಮ್ಕೊ ಲೇಔಟ್, ಕಲ್ಯಾಣ್ ಲೇಔಟ್, ಸುಬ್ಬಣ್ಣ ಗಾರ್ಡನ್, ವಿಡಿಯಾ ಲೇಔಟ್, ಎಂಆರ್‌ಸಿಆರ್‌ ಲೇಔಟ್, ಚಂದ್ರಾ ಲೇಔಟ್, ಬಾಪೂಜಿ ಲೇಔಟ್, ವಿನಾಯಕ ಲೇಔಟ್, ಮೂಡಲಪಾಳ್ಯ, ಕೆನರಾ ಬ್ಯಾಂಕ್ ಕಾಲೊನಿ, ವಿದ್ಯಾಗಿರಿ ಲೇಔಟ್, ಬಿಡಿಎ 13 ಮತ್ತು 14ನೇ ಬ್ಲಾಕ್, ಭೈರವೇಶ್ವರನಗರ, ನಾಗರಬಾವಿ, ಕಾವೇರಿ ಲೇಔಟ್, ಸಂಜೀನಿನಗರ, ಕಲ್ಯಾಣನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಕಟ್ಟಿಗೇನಹಳ್ಳಿ 66/11 ಕೆ.ವಿ. ವಿದ್ಯುತ್ ಉಪ ಕೇಂದ್ರ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಕಾರಣ ಡಿ. 26ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಉತ್ತರ ಗೇಟ್‌ 1, 2, 3, ರಾಯಭಾರಿ ಕಚೇರಿ, ಪಿಲಿಪ್ಸ್‌ ಕಂಪನಿ, ದ್ವಾರಕಾನಗರ, ಬಾಬಾನಗರ, ಕಟ್ಟಿಗೇನಹಳ್ಳಿ, ಬಾಗಲೂರು ಕ್ರಾಸ್, ಮಣಿಪಾಲ್‌ ಕಾಲೇಜು, ವಿನಾಯಕನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.