ADVERTISEMENT

Bengaluru Rains | ಬೆಂಗಳೂರಿನ ವಿವಿಧೆಡೆ ಜಿಟಿಜಿಟಿ ಮಳೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 0:00 IST
Last Updated 20 ಜುಲೈ 2025, 0:00 IST
<div class="paragraphs"><p>&nbsp;ಮೈಸೂರು ರಸ್ತೆಯಲ್ಲಿ ಶನಿವಾರ ತುಂತುರು ಮಳೆ ಸುರಿದ ವೇಳೆ ದ್ವಿಚಕ್ರ ವಾಹನದಲ್ಲಿ ಮಹಿಳೆಯರು ಸಾಗಿದರು &nbsp;</p></div>

 ಮೈಸೂರು ರಸ್ತೆಯಲ್ಲಿ ಶನಿವಾರ ತುಂತುರು ಮಳೆ ಸುರಿದ ವೇಳೆ ದ್ವಿಚಕ್ರ ವಾಹನದಲ್ಲಿ ಮಹಿಳೆಯರು ಸಾಗಿದರು  

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ನಗರದ ವಿವಿಧೆಡೆ ಶನಿವಾರ ಜಿಟಿಜಿಟಿ ಮಳೆಯಾಗಿದ್ದು, ಮಧ್ಯಾಹ್ನದಿಂದ ಆರಂಭವಾದ ಮಳೆ ತಡರಾತ್ರಿವರೆಗೂ ಸುರಿಯಿತು.

ADVERTISEMENT

ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಕೆಲವೆಡೆ ತುಂತುರು ಮಳೆ ಸುರಿಯತೊಡಗಿತು. ಮಧ್ಯಾಹ್ನದ ನಂತರ ವಿಜಯನಗರ, ದೀಪಾಂಜಲಿ ನಗರ, ಚಂದ್ರಾಲೇಔಟ್, ಹೊಸಕೆರೆಹಳ್ಳಿ, ಗಾಯತ್ರಿ ನಗರ, ಮಲ್ಲೇಶ್ವರ, ಶ್ರೀರಾಮಪುರ, ಎಂ.ಜಿ.ರಸ್ತೆ, ಟ್ರಿನಿಟಿ, ವಿಧಾನಸೌಧ ಸುತ್ತಮುತ್ತ, ಅರಮನೆ ರಸ್ತೆ, ಹಲಸೂರು, ಕೆ.ಆರ್.ಮಾರುಕಟ್ಟೆ, ಮಾಗಡಿ ರಸ್ತೆ ಸೇರಿ ಹಲವು ಪ್ರದೇಶಗಳಲ್ಲಿ ಮಳೆ ಸುರಿಯಿತು.

ರಾತ್ರಿ ಹಲವೆಡೆ ಮಳೆ ಬಿರುಸು ಪಡೆಯಿತು. ಕೆಲವರು ಕೊಡೆ ಹಿಡಿದು ರಸ್ತೆಯಲ್ಲಿ ಸಾಗಿದರೆ, ಮತ್ತೆ ಕೆಲವರು ತೊಯ್ದುಕೊಂಡು ಹೋದರು. ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಮೈಸೂರು ರಸ್ತೆ, ಬಳ್ಳಾರಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.