ಸಾಂದರ್ಭಿಕ ಚಿತ್ರ
ಬೆಂಗಳೂರು: 'ದೇವರಬೀಸನಹಳ್ಳಿ ಜಂಕ್ಷನ್‌ನಲ್ಲಿ ಸುಗಮ ಸಂಚಾರ ಸಲುವಾಗಿ ಸಕ್ರಾ ಆಸ್ಪತ್ರೆ ಕಡೆಗೆ ಸಂರ್ಪಕಿಸುವ ರಸ್ತೆಯನ್ನು ಏಕಮುಖ ರಸ್ತೆಯಾಗಿ ಪ್ರಾಯೋಗಿಕವಾಗಿ ಮಾರ್ಪಾಡು ಮಾಡಲಾಗಿದೆ' ಎಂದು ಪೂರ್ವ ಸಂಚಾರ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ತಿಳಿಸಿದ್ದಾರೆ.
ಮೇ 8ರವರೆಗೆ ಸಕ್ರಾ ಆಸ್ಪತ್ರೆ ರಸ್ತೆ ಕಡೆಯಿಂದ ದೇವರಬೀಸನಹಳ್ಳಿ ಜಂಕ್ಷನ್ ವರೆಗೆ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ಪರ್ಯಾಯ ಮಾರ್ಗವಾಗಿ ಸಕ್ರಾ ಆಸ್ಪತ್ರೆ ರಸ್ತೆ ಕಡೆಯಿಂದ ದೇವರಬೀಸನಹಳ್ಳಿ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಬೆಳ್ಳಂದೂರು ಕೋಡಿ ಕಡೆಗೆ ಸಂಚರಿಸಬೇಕು. ಕಾಡು ಬೀಸನಹಳ್ಳಿ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಸಕ್ರಾ ಆಸ್ಪತ್ರೆ ರಸ್ತೆ ಮೂಲಕ ಹೊರ ವರ್ತಲು ರಸ್ತೆ ಕಡೆಗೆ ಸಂಚರಿಸಿ ಗಣೇಶ ದೇವಸ್ಥಾನ ಕ್ರಾಸ್ ಬಳಿ ಎಡತಿರುವು ಪಡೆಯಬೇಕು.
ಬಳಿಕ ಕಾಡುಬೀಸನಹಳ್ಳಿ ಜಂಕ್ಷನ್ ತಲುಪಿ ಯು ಟರ್ನ್ ಪಡೆದು ಹೊರವರ್ತುಲ ರಸ್ತೆಯ ಸರ್ವಿಸ್ ರಸ್ತೆಯ ಮೂಲಕ ಸೆಸ್ನಾ ಬಿಸೆನೆಸ್ ಪಾರ್ಕ್ ಕಡೆಗೆ ಪ್ರವೇಶಿಸಿ ದೇವರಬೀಸನಹಳ್ಳಿ ಜಂಕ್ಷನ್ ಕಡೆಗೆ ಸಂಚರಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.