ADVERTISEMENT

ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ: ಜೆಎಸ್‌ಎಸ್‌ ಕಾಲೇಜು ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 19:41 IST
Last Updated 5 ಜೂನ್ 2022, 19:41 IST
26ನೇ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಮೈಸೂರಿನ ಜೆಎಸ್‌ಎಸ್‌ ಕಾಲೇಜಿನ ತಂಡದ ವಿದ್ಯಾರ್ಥಿಗಳಿಗೆ ಟ್ರೋಫಿ ಪ್ರದಾನ ಮಾಡಲಾಯಿತು. ಬೆಂಗಳೂರು ವಿ.ವಿ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್, ಹೈಕೋರ್ಟ್‌ ನ್ಯಾಯಮೂರ್ತಿ ಡಾ. ಎಚ್.ಬಿ. ಪ್ರಭಾಕರ ಶಾಸ್ತ್ರಿ, ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಮತ್ತು ನ್ಯಾಯಮೂರ್ತಿ ಸಿದ್ದಯ್ಯ ರಾಚಯ್ಯ , ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್‌ ವಿ. ನಾಡಗೌಡ ಇದ್ದರು.

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ಮತ್ತು ಕಾನೂನು ಅಧ್ಯಯನ ಕೇಂದ್ರ ಆಯೋ
ಜಿಸಿದ್ದ 26ನೇ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಮೈಸೂರಿನ ಜೆಎಸ್‌ಎಸ್‌ ಕಾಲೇಜು ಪ್ರಥಮ ಸ್ಥಾನ ಪಡೆದಿದೆ. ಜೆಎಸ್ಎಸ್ ಕಾಲೇಜು ತಂಡ₹15 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡಿತು. ದ್ವಿತೀಯ ಸ್ಥಾನ ಪಡೆದ ಭೋಪಾಲ್‌ನ ಎನ್ಎಲ್ಐ ತಂಡವು ₹10 ಸಾವಿರ ನಗದು ಮತ್ತು ಟ್ರೋಫಿ ಪಡೆಯಿತು.

ಮೈಸೂರಿನ ಜೆಎಸ್‌ಎಸ್‌ ಕಾಲೇಜಿನ ಲಿಯಾ ಅನ್ನಾ ಫ್ರಾನ್ಸಿಸ್ ಉತ್ತಮ ವಕೀಲೆ ಹಾಗೂ ಭೋಪಾಲ್‌ನ ಎನ್‌ಎಲ್‌ಯು ಕಾಲೇಜಿನ ದೇವಾಂಶ್ ದುಬೆ ಉತ್ತಮ ವಕೀಲರಾಗಿ ಆಯ್ಕೆಯಾದರು.

ಉತ್ತಮ ಸಂಶೋಧನಾರ್ಥಿಯಾಗಿ ನೋಯ್ಡಾದ ಎಲ್‌ಎಲ್‌ಸಿ ಕಾಲೇಜಿನ ಹರ್ಷಿತ ಗುಪ್ತ ಮತ್ತು ಉತ್ತಮ ಮೆಮೋರಿಯಲ್ ಪ್ರಶಸ್ತಿಯನ್ನು ನಾಗಪುರದ ಎಂಎನ್‌ಎಲ್‌ಯು ಆಕರ್ಷಕ ಟ್ರೋಫಿ ಮತ್ತು ತಲಾ ₹5 ಸಾವಿರ ನಗದು ಬಹುಮಾನಕ್ಕೆ ಭಾಜನರಾದರು. ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು ಮತ್ತು ಅಧ್ಯಯನ ಕೇಂದ್ರದ ಅಲ್ಯುಮ್ನಿ ಅಸೋಸಿಯೇಷನ್ ನಗದು ಬಹುಮಾನದ ಪ್ರಾಯೋಜಕತ್ವ ವಹಿಸಿಕೊಂಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.