ADVERTISEMENT

ಏಪ್ರಿಲ್ 10ರಂದು ಬೆಂಗಳೂರು ವಿ.ವಿ. ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 13:19 IST
Last Updated 8 ಏಪ್ರಿಲ್ 2021, 13:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 1 ಮತ್ತು 3ನೇ ವರ್ಷದ ಸ್ನಾತಕ ವಾರ್ಷಿಕ ಪದ್ಧತಿಯ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎಂ, ಬಿ.ಬಿ.ಎ, ಬಿ.ಎಚ್‌.ಎಂ ಹಾಗೂ ದೂರಶಿಕ್ಷಣ ಪರೀಕ್ಷೆಗಳು ಇದೇ 10 ರಂದು ನಡೆಯಲಿವೆ.

‘ಇದೇ 7ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ಕಾರಣದಿಂದಾಗಿ ಮುಂದೂಡಲಾಗಿತ್ತು. ಈಗ ಪರಿಷ್ಕೃತ ದಿನಾಂಕ ಬಿಡುಗಡೆ ಮಾಡಲಾಗಿದೆ’ ಎಂದು ಕುಲಸಚಿವರ (ಮೌಲ್ಯಮಾಪನ) ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT