ADVERTISEMENT

ಬೆಂಗಳೂರು ಜಲಮಂಡಳಿ ‌ನೀರಿನ ಅದಾಲತ್ ನಾಳೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 14:42 IST
Last Updated 12 ನವೆಂಬರ್ 2025, 14:42 IST
ಜಲಮಂಡಳಿ
ಜಲಮಂಡಳಿ   

ಬೆಂಗಳೂರು: ಬೆಂಗಳೂರು ಜಲಮಂಡಳಿಯು ವಿವಿಧ ಉಪ ವಿಭಾಗಗಳಲ್ಲಿ ನ.13ರ ಗುರುವಾರ ಬೆಳಿಗ್ಗೆ 9.30ರಿಂದ 11ರವರೆಗೆ ನೀರಿನ ಅದಾಲತ್‌ ಅನ್ನು ಹಮ್ಮಿಕೊಂಡಿದೆ.

ನೀರಿನ ಬಿಲ್‌, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿ ಸಮಸ್ಯೆಗಳನ್ನು ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಬಹುದು. ವಾಟ್ಸ್‌ ಆ್ಯಪ್‌ಸಂಖ್ಯೆ 8762228888ಗೆ ದೂರನ್ನು ದಾಖಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಯಲಹಂಕ ನ್ಯೂಟೌನ್‌ನ ಪಿನಾಕಿನಿ ಭವನ, ಜೆ.ಪಿ. ನಗರ 8ನೇ ಘಟ್ಟದ ಜಂಬೂಸವಾರಿ ದಿಣ್ಣೆ ಮುಖ್ಯರಸ್ತೆ, ಜಯನಗರ 4ನೇ ಟಿ ಬ್ಲಾಕ್‌ ಕಪಿಲ ಭವನ, ಚಿಕ್ಕಲಾಲ್‌ಬಾಗ್‌ ಪಾರ್ಕ್‌ ರಸ್ತೆ ತುಳಸಿ ತೋಟ, ಬನಗಿರಿನಗರದ 3ನೇ ಹಂತದ 1ನೇ ಮುಖ್ಯರಸ್ತೆ ನೆಲಮಹಡಿಯಲ್ಲಿ ಅದಾಲತ್‌ ಆಯೋಜಿಸಲಾಗಿದೆ.

ADVERTISEMENT

ಎ.ನಾರಾಯಣಪುರ ಮುಖ್ಯರಸ್ತೆ, ಕೆ.ಆರ್‌. ಪುರ ರೈಲ್ವೆ ನಿಲ್ದಾಣ ಎದುರು, ಕಸ್ತೂರಿನಗರ 1ನೇ ಮುಖ್ತರಸ್ತೆ, ಹಲಸೂರಿನ ಲಿಡೋ ಮಾಲ್‌ ಎದುರು, ಕೋರಮಂಗಲ 3ನೇ ಬ್ಲಾಕ್‌ನ 2ನೇ ಅಡ್ಡರಸ್ತೆ, ಎಂ.ಸಿ. ಲೇಔಟ್‌ ವಿಜಯನಗರ ವಾಟರ್ ಟ್ಯಾಂಕ್‌ ಎದುರು, ನಾಗರಬಾವಿ ಹೊರ ವರ್ತುಲ ರಸ್ತೆ 5ನೇ ಬ್ಲಾಕ್‌ನಲ್ಲಿ ಅದಾಲತ್‌ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.