
ಬೆಂಗಳೂರು: ವಿದ್ಯುತ್ ಸಂಬಂಧಿತ ಕುಂದು-ಕೊರತೆಗಳ ಶೀಘ್ರ ಪರಿಹಾರಕ್ಕೆ ಸಹಾಯವಾಣಿ ಸಂಖ್ಯೆ 1912 ಹಾಗೂ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ‘ವಾಟ್ಸ್ಆ್ಯಪ್ ಸಹಾಯವಾಣಿ’ ಸಂಖ್ಯೆಗಳಿಗೆ ದೂರು ದಾಖಲಿಸಲು ಬೆಸ್ಕಾಂ ಮನವಿ ಮಾಡಿದೆ.
ಒಂದು ವೇಳೆ 1912 ಸಹಾಯವಾಣಿ ಸಂಖ್ಯೆ ಲಭ್ಯವಾಗದಿದ್ದಲ್ಲಿ ರೈತರು ತಮ್ಮ ಜಿಲ್ಲೆಗೆ ಸಂಬಂಧಿಸಿದ ‘ವಾಟ್ಸ್ ಆ್ಯಪ್’ ಸಹಾಯವಾಣಿ ಸಂಖ್ಯೆಗಳಿಗೆ ದೂರುಗಳನ್ನು ನೀಡಬಹುದು. ಬೆಸ್ಕಾಂನ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ, ಉತ್ತರ, ಪೂರ್ವ ಹಾಗೂ ಪಶ್ಚಿಮ ವೃತ್ತಗಳಿಗೆ 4 ವಾಟ್ಸ್ ಆ್ಯಪ್ ಸಹಾಯವಾಣಿ ಸಂಖ್ಯೆಗಳು ಹಾಗೂ ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ವೃತ್ತಗಳಿಗೆ ತಲಾ ಒಂದು ‘ವಾಟ್ಸ್ ಆ್ಯಪ್ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ.
ಸಹಾಯವಾಣಿ ಕೇಂದ್ರದ ಗ್ರಾಹಕ ಸೇವಾ ಪ್ರತಿನಿಧಿಗಳು ದೂರುಗಳನ್ನು ಅಥವಾ ಸಂದೇಶಗಳನ್ನು ಸಂಬಂಧಿಸಿದ ಉಪ ವಿಭಾಗಗಳಿಗೆ ರವಾನಿಸಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.