ADVERTISEMENT

ಕಾಮಾಕ್ಷಿಪಾಳ್ಯ: ಬೈಕ್‌ ಕಳ್ಳತನ, ಮೆಕ್ಯಾನಿಕ್ ಸೇರಿ ಮೂವರ ಸೆರೆ, 26 ಬೈಕ್‌ ವಶ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 8:42 IST
Last Updated 29 ಜುಲೈ 2021, 8:42 IST
ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಶ ಪಡಿಸಿಕೊಂಡ ಬೈಕ್‌ಗಳು.
ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಶ ಪಡಿಸಿಕೊಂಡ ಬೈಕ್‌ಗಳು.   

ಬೆಂಗಳೂರು: ನಗರದ ಹಲವೆಡೆ ಬೈಕ್ ಕಳವು ಮಾಡಿದ್ದ ಆರೋಪದಡಿ ಮೆಕ್ಯಾನಿಕ್ ವಿಕಾಸ್‌ಕುಮಾರ್ ಸೇರಿ ಮೂವರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

'ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ₹ 36 ಲಕ್ಷ ಮೌಲ್ಯದ 26 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ' ಎಂದು ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

'ರಾಜಸ್ಥಾನದ ವಿಕಾಸ್‌ಕುಮಾರ್, ನಗರದಲ್ಲಿ ಮೆಕ್ಯಾನಿಕ್ ಕೆಲಸ‌ ಮಾಡುತ್ತಿದ್ದ. ಲಾಕ್‌ಡೌನ್‌ನಿಂದ ಕೆಲಸ ಹೋಗಿತ್ತು. ವಾಪಸು ರಾಜಸ್ಥಾನಕ್ಕೆ ಹೋಗಿದ್ದ. ಬೆಂಗಳೂರಿನಲ್ಲಿ ನೆಲೆಸಿದ್ದ ಇಬ್ಬರು ಸಹಚರರ ಮೂಲಕ ಬೈಕ್ ಕಳವು ಮಾಡಿಸುತ್ತಿದ್ದ. ಕೃತ್ಯ ಎಸಗಲು ವಿಕಾಸ್‌ಕುಮಾರ್, ವಿಮಾನದಲ್ಲಿ ನಗರಕ್ಕೆ ಬಂದು ಹೋಗುತ್ತಿದ್ದ' ಎಂದು ಡಿಸಿಪಿ ಹೇಳಿದರು.

ADVERTISEMENT

'ಆರೋಪಿಗಳು ಬೈಕ್‌ಗಳನ್ನು ನಗರದಿಂದ ರಾಜಸ್ಥಾನದವರೆಗೆ ಚಲಾಯಿಸಿಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಓಎಲ್‌ಎಕ್ಸ್ ಜಾಲತಾಣದಲ್ಲಿ ಇರುತ್ತಿದ್ದ ಸಾರ್ವಜನಿಕರ ವಾಹನಗಳ ದಾಖಲೆಗಳನ್ನು ಕದ್ದು, ಅವುಗಳನ್ನೇ ಬಳಸಿಕೊಂಡು ಬೈಕ್ ಮಾರುತ್ತಿದ್ದರು. ಅದರಿಂದ ಬಂದ ಹಣವನ್ನು ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದರು' ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.