ADVERTISEMENT

ಬಿಕ್ಲು ಶಿವ ಕೊಲೆ: ತನಿಖೆಗೆ ಸಿಐಡಿ ಪೊಲೀಸರ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 0:19 IST
Last Updated 27 ಜುಲೈ 2025, 0:19 IST
   

ಬೆಂಗಳೂರು: ರೌಡಿ ಶೀಟರ್‌ ಶಿವಪ್ರಕಾಶ್ ಅಲಿಯಾಸ್‌ ಬಿಕ್ಲು ಶಿವನ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿದ್ದು, ತನಿಖಾಧಿಕಾರಿಗಳು ತನಿಖೆಗೆ ಸಿದ್ಧತೆ ನಡೆಸಿದ್ದಾರೆ.

ತನಿಖೆಗೆ ಸಿಐಡಿ ತಂಡ ಸಹ ರಚಿಸಲಾಗಿದೆ. ಡಿವೈಎಸ್ಪಿ ಉಮೇಶ್, ಇನ್​ಸ್ಪೆಕ್ಟರ್​ಗಳಾದ ಸಂದೀಪ್ ಮೇಟಿ, ಆರ್.ಮಂಜುನಾಥ್ ಹಾಗೂ ರಾಘವೇಂದ್ರ ತನಿಖಾ ತಂಡದಲ್ಲಿ ಇದ್ದಾರೆ.

ಭಾರತಿನಗರದಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಅಲ್ಲಿನ ಪೊಲೀಸರು ತನಿಖೆ ನಡೆಸಿ ಆರೋಪಿಗಳ ಹೇಳಿಕೆ ದಾಖಲಿಸಿಕೊಂಡಿದ್ದರು. 16 ಆರೋ‍ಪಿಗಳು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದು, ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಸಿಐಡಿ ಮೂಲಗಳು ತಿಳಿಸಿವೆ.

ADVERTISEMENT

‘ಪ್ರಕರಣದ ತನಿಖಾಧಿಕಾರಿ ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಪ್ರಕಾಶ್ ರಾಥೋಡ್‌ ಅವರು ಪ್ರಕರಣದ ಐದನೇ ಆರೋಪಿ, ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಎರಡು ಬಾರಿ ವಿಚಾರಣೆ ನಡೆಸಿದ್ದಾರೆ. ಶಾಸಕರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಪ್ರಕರಣವು ಇದೀಗ ಸಿಐಡಿಗೆ ವರ್ಗಾವಣೆ ಆಗಿರುವ ಕಾರಣಕ್ಕೆ ಮತ್ತೆ ಶಾಸಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.