ವಿಮಾನ
ಬೆಂಗಳೂರು: ದೀಪಾ ಅಕಾಡೆಮಿಯ 45 ಅಂಧ ಮಕ್ಕಳು ಇದೇ 17ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೇಲಂಗೆ ವಿಮಾನದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಸ್ವೀಟ್‌ನೆಸ್ ಆಫ್ ಬ್ಲೈಂಡ್‌ನೆಸ್ (ಎಸ್‌ಒಬಿ) ಸಂಸ್ಥೆ ತಿಳಿಸಿದೆ.
‘ಪ್ರವಾಸದಲ್ಲಿ ಮಕ್ಕಳೊಂದಿಗೆ ಎಂಟು ಮಂದಿ ಸ್ವಯಂ ಸೇವಕರು ತೆರಳಲಿದ್ದಾರೆ. 45 ಮಕ್ಕಳಿಗೆ ವಿಮಾನದಲ್ಲಿ ಇದು ಮೊದಲ ಪ್ರಯಾಣವಾಗಿದ್ದು, ಈ ಮಕ್ಕಳ ಬಹುದಿನಗಳ ಕನಸು ಈಗ ನನಸಾಗುತ್ತಿದೆ ಎಂದು ಸಂಸ್ಥೆಯ ನೇತೃತ್ವ ವಹಿಸಿರುವ ಪಿ. ಸತೀಶ್ ತಿಳಿಸಿದರು.
‘ನಮ್ಮ ಸಂಸ್ಥೆಯ ಮೂಲಕ ಇದುವರೆಗೂ 3 ಸಾವಿರಕ್ಕೂ ಹೆಚ್ಚು ಅಂಧರನ್ನು ದೇಶದ ವಿವಿಧ ದೇವಸ್ಥಾನಗಳು, ಕ್ರಿಕೆಟ್ ಕ್ರೀಡಾಂಗಣ, ಜಲಪಾತಗಳು ಹಾಗೂ ತಾರಾಲಯಗಳಿಗೆ ಕರೆದುಕೊಂಡು ಹೋಗಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.