
ಸಾದರ ಸ್ವೀಕಾರ
ಬೆಂಗಳೂರು: ಬಿ.ಎಂ.ಶ್ರೀ ಪ್ರತಿಷ್ಠಾನವು ವಾರ್ಷಿಕವಾಗಿ ನೀಡುವ ಸೂ.ವೆಂ. ಆರಗ ವಿಮರ್ಶಾ ಪ್ರಶಸ್ತಿಗಾಗಿ ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗಿದೆ.
₹10 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಈ ಪ್ರಶಸ್ತಿ ಹೊಂದಿದ್ದು, 2025ರ ಜನವರಿಯಿಂದ ಡಿಸೆಂಬರ್ ಅಂತ್ಯದ ಒಳಗೆ ಮೊದಲ ಆವೃತ್ತಿಯಾಗಿ ಪ್ರಕಟವಾಗಿರುವ ವಿಮರ್ಶಾ ಕೃತಿಯ ಮೂರು ಪ್ರತಿಗಳ ಜೊತೆಗೆ ಪ್ರತ್ಯೇಕ ಹಾಳೆಯಲ್ಲಿ ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಿ ಮಾರ್ಚ್ 25ರ ಒಳಗೆ ಗೌರವ ಕಾರ್ಯದರ್ಶಿ, ಬಿ.ಎಂ.ಶ್ರೀ ಪ್ರತಿಷ್ಠಾನ, ಬಿ.ಎಂ.ಶ್ರೀ ಪ್ರತಿಷ್ಠಾನದ ರಸ್ತೆ, 3ನೇ ಮುಖ್ಯರಸ್ತೆ, ನರಸಿಂಹರಾಜ ಕಾಲೊನಿ, ಬೆಂಗಳೂರು, 560004, ಮೊಬೈಲ್: 9972812127, ಇಲ್ಲಿಗೆ ಕಳುಹಿಸಬೇಕು ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು ತಿಳಿಸಿದ್ದಾರೆ.
ವ್ಯಂಗ್ಯಚಿತ್ರ ಸ್ಪರ್ಧೆ
ವ್ಯಂಗ್ಯಚಿತ್ರಕಾರರಾದ ದಿವಂಗತ ಮಾಯಾ ಕಾಮತ್ ಅವರ 75ನೇ ಜನ್ಮ ದಿನದ ಪ್ರಯುಕ್ತ ಭಾರತೀಯ ವ್ಯಂಗ್ಯ ಚಿತ್ರಕಾರರ ಸಂಸ್ಥೆಯು ‘ಅಂತರರಾಷ್ಟ್ರೀಯ ಮಾಯಾ ಕಾಮತ್ ಸ್ಮಾರಕ’ ವ್ಯಂಗ್ಯಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ಮಾಯಾ ಕಾಮತ್ ಅವರ ಕುಟುಂಬದ ಪ್ರಾಯೋಜಕತ್ವದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನ ₹1 ಲಕ್ಷ, ಎರಡನೇ ಬಹುಮಾನ ₹50 ಸಾವಿರ, ಮೂರನೇ ಬಹುಮಾನ ₹25 ಸಾವಿರ ಹಾಗೂ ಹತ್ತು ಅತ್ಯುತ್ತಮ ವ್ಯಂಗ್ಯಚಿತ್ರಗಳಿಗೆ ಪ್ರಮಾಣ ಪತ್ರ ಹಾಗೂ ತಲಾ ₹5 ಸಾವಿರ ಬಹುಮಾನ ನೀಡಲಾಗುತ್ತದೆ.
ಎಲ್ಲ ವೃತ್ತಿಪರ ಮತ್ತು ಹವ್ಯಾಸಿ ವ್ಯಂಗ್ಯಚಿತ್ರಕಾರರು ಭಾಗವಹಿಸಬಹುದು. ವಿವರಗಳಿಗೆ www.cartoonistsindia.org ಸಂಪರ್ಕಿಸಬಹುದು. ಸ್ಪರ್ಧಿಗಳು ಏಪ್ರಿಲ್ 30ರ ಒಳಗೆ mkmawards@gmail.com, cartoonistsindia@gmail.com ಗೆ ಮೇಲ್ ಕಳುಹಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.