ADVERTISEMENT

ನಮ್ಮ ಮೆಟ್ರೊ ಪ್ರಯಾಣ ದರ ಶೇ 47ರಷ್ಟು ಹೆಚ್ಚಳ: ನಾಳೆಯಿಂದಲೇ ಪರಿಷ್ಕೃತ ದರ ಜಾರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಫೆಬ್ರುವರಿ 2025, 12:35 IST
Last Updated 8 ಫೆಬ್ರುವರಿ 2025, 12:35 IST
<div class="paragraphs"><p>ಮೆಟ್ರೊ </p></div>

ಮೆಟ್ರೊ

   

ಬೆಂಗಳೂರು: ನಗರದ ಪ್ರಮುಖ ಸಾರ್ವಜನಿಕ ಸಾರಿಗೆಯಾಗಿರುವ ‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಬಿಎಂಆರ್‌ಸಿಎಲ್‌ ಸುಮಾರು ಶೇ 47ರಷ್ಟು ಹೆಚ್ಚಿಸಿ ಶನಿವಾರ ಆದೇಶ ಹೊರಡಿಸಿದೆ. ಪರಿಷ್ಕೃತ ದರವು ಭಾನುವಾರದಿಂದಲೇ ಜಾರಿಯಾಗಲಿದೆ. 

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಮೂವರು ಸದಸ್ಯರ ದರ ನಿಗದಿ ಸಮಿತಿಯನ್ನು ಕೇಂದ್ರ ಸರ್ಕಾರ ನೇಮಿಸಿತ್ತು. ಈ ಸಮಿತಿಯು ಶೇ 40ರಿಂದ ಶೇ 45ರವರೆಗೆ ಹೆಚ್ಚಿಸುವಂತೆ ಶಿಫಾರಸು ಮಾಡಿತ್ತು. 

ADVERTISEMENT

ಬಿಎಂಆರ್‌ಸಿಎಲ್‌ ಆಡಳಿತ ಮಂಡಳಿಯು ಸಮಿತಿಯ ಶಿಫಾರಸಿನಂತೆ ಪ್ರಯಾಣ ದರ ಹೆಚ್ಚಳ ಮಾಡಲು ಜನವರಿ ಮೊದಲ ವಾರದಲ್ಲಿಯೇ ನಿರ್ಧರಿಸಿತ್ತು. ಆದರೆ, ಜಾರಿಗೆ ಬಂದಿರಲಿಲ್ಲ.

ಸ್ಮಾರ್ಟ್‌ ಕಾರ್ಡ್‌ದಾರರಿಗೆ ಶೇ 5ರಷ್ಟು ರಿಯಾಯಿತಿ ಮತ್ತು ಜನದಟ್ಟಣೆ ಅವಧಿಯನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ಸಂಚರಿಸಿದರೆ ಮತ್ತೆ ಶೇ 5ರಷ್ಟು ರಿಯಾಯಿತಿ ಸೇರಿ ಒಟ್ಟು ಶೇ 10ರಷ್ಟು ರಿಯಾಯಿತಿ ನೀಡಲು ನಿರ್ಧರಿಸಿದೆ. ಆದರೆ, ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಪ್ರಯಾಣ ದರ ಪಾವತಿಸುವವರಿಗೆ ಯಾವುದೇ ರಿಯಾಯಿತಿ ನೀಡಿಲ್ಲ. ಕನಿಷ್ಠ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ಗರಿಷ್ಠ ದರವು ₹60 ಇದ್ದಿದ್ದು ₹90ಕ್ಕೆ ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.