ADVERTISEMENT

ನಮ್ಮ ಮೆಟ್ರೊ: ಸಂಚಾರ ಸಮಯದಲ್ಲಿ ಮಹತ್ವದ ಬದಲಾವಣೆ, ಪ್ರಯಾಣಿಕರಿಗೆ ಸಿಹಿ ಸುದ್ದಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 11:11 IST
Last Updated 18 ಡಿಸೆಂಬರ್ 2021, 11:11 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ   

ಬೆಂಗಳೂರು:ಡಿಸೆಂಬರ್ 20ರಿಂದ ಮೆಟ್ರೊ ರೈಲುಗಳ ಸಂಚಾರ ಬೆಳಿಗ್ಗೆ 5 ಗಂಟೆಯಿಂದ ಆರಂಭಗೊಳ್ಳಲಿದೆ ಎಂದುಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ತಿಳಿಸಿದೆ.

ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 5 ಗಂಟೆಯಿಂದಲೇಮೆಟ್ರೊ ರೈಲುಗಳು ಸಂಚರಿಸಲಿವೆ. ಭಾನುವಾರ ಮಾತ್ರ ಬೆಳಿಗ್ಗೆ 7 ಗಂಟೆಯಿಂದ ಮೆಟ್ರೊ ಸೇವೆ ಇರಲಿದೆ.

ಸದ್ಯಬೆಳಿಗ್ಗೆ 6 ಗಂಟೆಯಿಂದ ಮೆಟ್ರೊ ಸೇವೆಗಳ ಕಾರ್ಯಾಚರಣೆ ಆರಂಭಗೊಳ್ಳುತ್ತಿತ್ತು.

ADVERTISEMENT

ಹೊಸ ವೇಳಾಪಟ್ಟಿಯಿಂದನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ, ಬೈಯಪ್ಪನಹಳ್ಳಿಯಿಂದ ಮೊದಲ ರೈಲುಗಳು ಬೆಳಿಗ್ಗೆ 5 ಗಂಟೆಯಿಂದ ಹೊರಡಲಿವೆ. ಇದರಿಂದ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎನ್ನಲಾಗಿದೆ.

ಬೆಳಿಗ್ಗೆ 5 ರಿಂದ ಮೆಟ್ರೊ ಸೇವೆಯನ್ನು ಆರಂಭಿಸುವಂತೆ ಅನೇಕ ಪ್ರಯಾಣಿಕರು ಒತ್ತಾಯಿಸಿದ್ದರು. ದೂರದೂರುಗಳಿಂದ ಬೆಳಿಗ್ಗೆ ಬೆಂಗಳೂರಿಗೆ ಬಂದು ಮೆಟ್ರೊ ಮೂಲಕ ಕಚೇರಿ, ಮನೆ ತಲುಪವವರು6 ಗಂಟೆಯವರೆಗೆ ಮೆಟ್ರೊ ನಿಲ್ದಾಣ ಕಾಯುವ ಪರಿಸ್ಥಿತಿ ಇತ್ತು. ಅಲ್ಲದೇ ಯಶವಂತಪುರ ಸೇರಿದಂತೆ ಅನೇಕ ಕಡೆ ಬೆಳಿಗ್ಗೆ 6ಕ್ಕೆ ಮೆಟ್ರೊಗಾಗಿ ಜನದಟ್ಟಣೆಯುಂಟಾಗುತ್ತಿತ್ತು.

‘ಎಲ್ಲ ಟರ್ಮಿನಲ್‌ಗಳಿಂದ ರಾತ್ರಿ 11 ಗಂಟೆಗೆ ಹಾಗೂ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ರಾತ್ರಿ 11.30ಕ್ಕೆ ಕೊನೆಯ ರೈಲುಗಳು ಹೊರಡಲಿವೆ’ ಎಂದು‍ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.