ADVERTISEMENT

ವಜ್ರ ಬಸ್‌: ದೈನಿಕ, ಮಾಸಿಕ ಪಾಸ್‌ ದರ ಇಂದಿನಿಂದ ಏರಿಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 2:35 IST
Last Updated 1 ಜನವರಿ 2023, 2:35 IST
   

ಬೆಂಗಳೂರು: ಬಿಎಂಟಿಸಿಯು ‘ವಜ್ರ ಸೇವೆಯ ಬಸ್‌’ಗಳ ದೈನಿಕ ಹಾಗೂ ಮಾಸಿಕ ಪಾಸಿನ ದರವನ್ನು ಏರಿಕೆ ಮಾಡಿದ್ದು, ಜ.1ರಿಂದ ಹೊಸ ದರಗಳು ಜಾರಿಗೆ ಬರಲಿವೆ.

ಇಂಧನ ಬೆಲೆ ಏರಿಕೆಯಾಗಿದ್ದು, ಸಂಸ್ಥೆಯ ಆರ್ಥಿಕ ಹಿತವನ್ನು ಗಮನದಲ್ಲಿಟ್ಟುಕೊಂಡು ದರ ಏರಿಕೆ ಮಾಡಲಾಗುತ್ತಿದೆ. ಸಾಮಾನ್ಯ ಮಾಸಿಕ ಪಾಸುದಾರರು ಮತ್ತು ಹಿರಿಯ ನಾಗರಿಕ ಸಾಮಾನ್ಯ ಮಾಸಿಕ ಪಾಸುದಾರರು ಭಾನುವಾರದಂದು ಮಾನ್ಯತಾ ಪಾಸಿನ ಜತೆಗೆ ವಜ್ರ ಸೇವೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಕಲ್ಪಿಸಿದ್ದ ಸೌಲಭ್ಯವನ್ನು ವಾಪಸ್‌ ಪಡೆಯಲಾಗಿದೆ.

ವಜ್ರ ಮಾಸಿಕ ಪಾಸು ₹ 1,500ರಿಂದ ₹ 1,800ಕ್ಕೆ, ವಜ್ರ ದೈನಿಕ ಪಾಸಿನ ದರವನ್ನು ₹ 100ರಿಂದ ₹ 120ಕ್ಕೆ, ಸಾಮಾನ್ಯ ಮಾಸಿಕ ಪಾಸುದಾರರು ವಜ್ರ ವಾಹನಗಳಲ್ಲಿ ಪ್ರತಿ ಪ್ರಯಾಣಕ್ಕೆ ನೀಡಬೇಕಿದ್ದ ಚೀಟಿ ದರವನ್ನು ₹ 20ರಿಂದ ₹ 25ಕ್ಕೆ ಹಾಗೂ ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ ಪಾಸುದಾರರ ಪ್ರತಿ ಪ್ರಯಾಣದ ಚೀಟಿ ದರವನ್ನು ₹ 20ರಿಂದ 25ಕ್ಕೆ ಏರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.