ADVERTISEMENT

ಬಿಎಂಟಿಸಿಯಿಂದ ₹665 ಕೋಟಿ ಸಾಲ ಪಾವತಿಸುವುದು ಬಾಕಿ ಉಳಿದಿದೆ: ಬಿ. ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 5:30 IST
Last Updated 24 ಸೆಪ್ಟೆಂಬರ್ 2022, 5:30 IST
ಬಿಎಂಟಿಸಿ
ಬಿಎಂಟಿಸಿ   

ಬೆಂಗಳೂರು: ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ)ಕಳೆದ ಐದು ವರ್ಷಗಳಲ್ಲಿ ₹1324.9 ಕೋಟಿ ಸಾಲ ಪಡೆದಿದ್ದು, ₹679 ಕೋಟಿ ಮರುಪಾವತಿಸಿದೆ’ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಕೆ. ಗೋವಿಂದರಾಜ್‌ ಅವರ ಪರವಾಗಿ ಯು.ಬಿ. ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈಗ ₹665 ಕೋಟಿ ಸಾಲ ಪಾವತಿಸುವುದು ಬಾಕಿ ಉಳಿದಿದೆ’ ಎಂದು ತಿಳಿಸಿದರು.

ಬಸ್‌ ಘಟಕಗಳು ಮತ್ತು ಕಾರ್ಯಾಗಾರಗಳ ಅಭಿವೃದ್ಧಿ, ಬಸ್‌ಗಳ ಖರೀದಿ ಮತ್ತು ಭವಿಷ್ಯ ನಿಧಿ ಬಾಕಿ ಪಾವತಿಸಲು ಸಾಲದ ಮೊತ್ತವನ್ನು ಬಳಸಲಾಗಿದೆ. ಸರ್ಕಾರದಿಂದಲೂ ಅನುದಾನ ದೊರೆಯಬೇಕಾಗಿದೆ. ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌ ಮತ್ತು ಶಾಲಾ ಮಕ್ಕಳ ಬಸ್‌ ಪಾಸ್‌ಗೆ ಸಂಬಂಧಿಸಿದ ಮೊತ್ತವನ್ನು ಸರ್ಕಾರ ಪಾವತಿಸಬೇಕಾಗಿದೆ ಎಂದು ವಿವರಿಸಿದರು.

ADVERTISEMENT

ಯು.ಬಿ. ವೆಂಕಟೇಶ್‌ ಪ್ರತಿಕ್ರಿಯಿಸಿ, ‘ಬಿಎಂಟಿಸಿಯ ಹಲವು ಕಟ್ಟಡಗಳು ಖಾಲಿ ಉಳಿದಿವೆ. ಈ ಕಟ್ಟಡಗಳನ್ನು ಬಾಡಿಗೆಗೆ ನೀಡಿ ಆದಾಯ ಗಳಿಸಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.