ADVERTISEMENT

’ಬೋಲಾಸ್‌’ನ 20 ಮಳಿಗೆಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2023, 19:24 IST
Last Updated 29 ಜೂನ್ 2023, 19:24 IST

ಬೆಂಗಳೂರು: ಬೋಲಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿ ತನ್ನ 20 ನೂತನ ಮಳಿಗೆಗಳನ್ನು ನಗರದಲ್ಲಿ ಆರಂಭಿಸಿದೆ. 

ಪೈ ಗ್ರೂಪ್ ಆಫ್ ಹೋಟೆಲ್‌ ಅಧ್ಯಕ್ಷ ಜಗನ್ನಾಥ್ ವಿ. ಪೈ ಅವರು ಜಯನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಳಿಗೆಗಳಿಗೆ ಚಾಲನೆ ನೀಡಿದರು.

ಮತ್ತಿಕೆರೆ, ವಿದ್ಯಾರಣ್ಯಪುರ, ನೆಲಮಂಗಲ, ಬನ್ನೇರುಘಟ್ಟ, ಬಸವೇಶ್ವರ ನಗರ, ಮಲ್ಲೇಶ್ವರ, ವಿಜಯನಗರ, ಟಿಸಿ ಪಾಳ್ಯ, ಗಾಂಧಿ ಬಜಾರ್, ಬಾಣಸವಾಡಿ, ಬನಶಂಕರಿ, ಉತ್ತರಹಳ್ಳಿ, ಜಯನಗರ, ವಿಲ್ಸನ್‌ಗಾರ್ಡನ್, ಎಚ್‌ಎಸ್‌ಆರ್ ಲೇಔಟ್, ಆರ್‌.ಟಿ. ನಗರ, ನ್ಯೂ ತಿಪ್ಪಸಂದ್ರ, ಸರ್ಜಾಪುರ ರಸ್ತೆ ಮತ್ತು ಹರಳೂರುಗಳಲ್ಲಿ ಮಳಿಗೆಗಳನ್ನು ತೆರೆಯಲಾಗಿದೆ

ADVERTISEMENT

ಬೋಲಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಬೋಲಾ ರಾಹುಲ್ ಮಾತನಾಡಿ, ಗೋಡಂಬಿ, ದ್ರಾಕ್ಷಿ, ಬಾದಾಮಿ ಮುಂತಾದ ಡ್ರೈ ಫ್ರೂಟ್‌ಗಳು ವಿಲಾಸಿ ವಸ್ತುಗಳು ಎನ್ನುವ ಗ್ರಾಹಕರ ಗ್ರಹಿಕೆಯನ್ನು ಬದಲಾಯಿಸುವುದು ನಮ್ಮ ಗುರಿಯಾಗಿದೆ’ ಎಂದು ತಿಳಿಸಿದ್ದಾರೆ.

ಮಾಹಿತಿಗೆ: https://bolas.co.in/dry-fruits

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.