ADVERTISEMENT

ವಿದ್ಯಾರ್ಥಿಗಳಿಂದ ಕೆರೆ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2018, 19:44 IST
Last Updated 8 ಸೆಪ್ಟೆಂಬರ್ 2018, 19:44 IST
ಕ್ರೈಸ್ಟ್‌ ಕಾಲೇಜು ವಿದ್ಯಾರ್ಥಿಗಳು ಕೆರೆ ಸ್ವಚ್ಛತೆಯಲ್ಲಿ ತೊಡಗಿರುವುದು– ಪ್ರಜಾವಾಣಿ ಚಿತ್ರ
ಕ್ರೈಸ್ಟ್‌ ಕಾಲೇಜು ವಿದ್ಯಾರ್ಥಿಗಳು ಕೆರೆ ಸ್ವಚ್ಛತೆಯಲ್ಲಿ ತೊಡಗಿರುವುದು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ಬನ್ನೇರುಘಟ್ಟ ರಸ್ತೆಯ ಅರಕೆರೆಯ ಕೆರೆ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಜತೆ ಕೈಜೋಡಿಸಿದರು. ಉಪನ್ಯಾಸಕರ ಜತೆ ಬಂದಿದ್ದ 200 ವಿದ್ಯಾರ್ಥಿಗಳು ಮುಖಗವಸು, ಕೈಗವಸು ತೊಟ್ಟು ಕೆರೆಯಲ್ಲಿ ಬೆಳೆದಿದ್ದ ಜೊಂಡು, ಪಾರ್ಥೇನಿಯಂ ಗಿಡಗಳನ್ನು ಕೀಳುವಲ್ಲಿ ಮಗ್ನರಾದರು.

ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮೀ ಮುರಳಿ, ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಕುಮಾರ್, ಸ್ಥಳೀಯ ಬಿಜೆಪಿ ಮುಖಂಡ ಮುರಳಿ ಹಾಗೂ ಸ್ಥಳೀಯರು ವಿದ್ಯಾರ್ಥಿಗಳೊಂದಿಗೆ ಸ್ವಚ್ಛತೆಯಲ್ಲಿ ತೊಡಗಿದರು.

500 ವರ್ಷಗಳ ಇತಿಹಾಸವಿರುವ 45 ಎಕರೆ ವಿಸ್ತೀರ್ಣದ ಕೆರೆ ಒತ್ತುವರಿ ಆಗಿ 37 ಎಕರೆ ಉಳಿದಿದೆ. ಬನ್ನೇರುಘಟ್ಟ ರಸ್ತೆಗೆ ಹೊಂದಿಕೊಂಡ 8 ಎಕರೆ ಕೆರೆ ಜಾಗವನ್ನು ಒತ್ತುವರಿ ಮಾಡಲಾಗಿದೆ. ಈ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.ಕೈಗಾರಿಕೆಗಳ ತ್ಯಾಜ್ಯ ನೀರು ಮತ್ತು ಪಕ್ಕದ ಲೇಔಟ್ ಗಳ ಚರಂಡಿ ನೀರು ಸೇರಿ ಕೆರೆ ಸಂಪೂರ್ಣವಾಗಿ ಕಲುಷಿತಗೊಂಡಿದೆ.

ADVERTISEMENT

ಈ ವೇಳೆ ಪ್ರತಿಕ್ರಿಯಿಸಿದ ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮಿ ಮುರಳಿ, ‘ಕೆರೆ ಸ್ವಚ್ಛತೆ ಸಂಬಂಧಿಸಿ ಕೌನ್ಸಿಲ್‌ ಸಭೆಗಳಲ್ಲಿ ಪ್ರಸ್ತಾಪಿಸಿದ್ದೇನೆ. ಆದರೆ ಯಾವುದೇ ಅನುದಾನ ನೀಡುತ್ತಿಲ್ಲ. ಅಧಿಕಾರಿಗಳ ಅಸಹಕಾರದಿಂದ ಕೆರೆ ಸಂರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ವಿದ್ಯಾರ್ಥಿಗಳು ಕೆರೆ ಸಂರಕ್ಷಣೆ ಕುರಿತು ಬೀದಿ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.