ಬೆಂಗಳೂರು: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು ‘ನೂರು ಶಾಲೆಗಳಿಗೆ ನೂರು ಪುಸ್ತಕ’ ಯೋಜನೆ ಹಮ್ಮಿಕೊಂಡಿದ್ದು, ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ಈ ವರ್ಷ ಉಚಿತವಾಗಿ 10 ಸಾವಿರ ಪುಸ್ತಕಗಳನ್ನು ವಿತರಿಸಲು ಮುಂದಾಗಿದೆ.
ಯೋಜನೆಯಡಿ ಈಗಾಗಲೇ 9 ಜಿಲ್ಲೆಗಳ 900 ಸರ್ಕಾರಿ ಶಾಲೆಗಳಿಗೆ 90 ಸಾವಿರ ಪುಸ್ತಕಗಳನ್ನು ವಿತರಿಸಲಾಗಿದೆ. ಈ ಸಾಲಿನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ನೂರು ಸರ್ಕಾರಿ
ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ.23ರಂದು ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಹಾಗೂ ಕಾರ್ಯದರ್ಶಿ ಆರ್. ದೊಡ್ಡೇಗೌಡ ಮನವಿ ಮಾಡಿದ್ದಾರೆ.
ಒಂದು ಶೀರ್ಷಿಕೆಯ ನೂರು ಪ್ರತಿಗಳನ್ನು ಆರ್. ದೊಡ್ಡೇಗೌಡ, ಕಾರ್ಯದರ್ಶಿ, ನಿಡಸಾಲೆ ಪಿ. ವಿಜಯ್, ಸಾಹಿತ್ಯ ಸುಗ್ಗಿ, ನಂ.40, 3ನೇ ಬ್ಲಾಕ್, 2ನೇ ಹಂತ, ನಾಗರಬಾವಿ, ಬೆಂಗಳೂರು –560072 ಈ ವಿಳಾಸಕ್ಕೆ ಕಳುಹಿಸಬೇಕು. ದೂರವಾಣಿ ಮೂಲಕ ಸಂಪರ್ಕಿಸಿದರೆ ಸಂಘದ ಪ್ರತಿನಿಧಿಗಳು ಬಂದು ಪುಸ್ತಕ ಸ್ವೀಕರಿಸುತ್ತಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸಂಪರ್ಕಕ್ಕೆ: 9448753991 ಅಥವಾ 9886249672
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.