ADVERTISEMENT

‘ಕಾರ್ಲ್‌ ಮಾರ್ಕ್ಸ್‌ ಬಂಡವಾಳ’ ಕೃತಿ ಬಿಡುಗಡೆ ಮತ್ತು ಸಂವಾದ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 19:45 IST
Last Updated 29 ಜುಲೈ 2019, 19:45 IST

ಆಗಸ್ಟ್‌ 2ರಂದು ‘ಕಾರ್ಲ್‌ ಮಾರ್ಕ್ಸ್‌ ಬಂಡವಾಳ’ ಕೃತಿ ಬಿಡಗಡೆಯಾಗಲಿದೆ.

ಬೆಳಿಗ್ಗೆ 10 ಕ್ಕೆ ಸಿನಿಮಾ ಪ್ರದರ್ಶನ ನಡೆಯಲಿದೆ. 10.30ಕ್ಕೆ ನಡೆಯುವ ಮೊದಲ ಗೋಷ್ಠಿಯಲ್ಲಿ ‘ಬಂಡವಾಳ’ದ 150 ವರ್ಷಗಳು ಮತ್ತು ಎಡಪಂಥದ ಮರು–ಶೋಧನೆ’ ವಿಷಯದ ಕುರಿತು ಸಂವಾದ ನಡೆಯಲಿದೆ. ಸಂವಾದದಲ್ಲಿ: ಪ್ರಭಾತ್‌ ಪಟ್ನಾಯಕ್‌, ನಟರಾಜ್‌ ಹುಳಿಯಾರ್‌, ಎಚ್‌.ಎಸ್‌.ಅನುಪಮಾ, ಕೆ.ಎನ್‌.ಉಮೇಶ್‌, ಕಿರಣ್‌ ಗಾಜನೂರು.ಅಧ್ಯಕ್ಷತೆ: ಜಿ.ವಿ.ಶ್ರೀರಾಮರೆಡ್ಡಿ.

ಮಧ್ಯಾಹ್ನ 2ಕ್ಕೆ ಎರಡನೇ ಗೋಷ್ಠಿ. ವಿಷಯ: ‘ಬಂಡವಾಳ ಇಂದು ಯಾಕೆ ಓದಬೇಕು?’. ಸಂವಾದದಲ್ಲಿ: ಜಿ.ರಾಜಶೇಖರ್‌, ಬಿ.ಎಂ.ಪುಟ್ಟಯ್ಯ, ಎನ್‌.ಕೆ.ವಸಂತರಾಜ. ಅಧ್ಯಕ್ಷತೆ: ವಿ.ಎನ್‌.ಲಕ್ಷ್ಮೀನಾರಾಯಣ.

ADVERTISEMENT

ಸಂಜೆ 4ಕ್ಕೆ ಬರಗೂರು ರಾಮಚಂದ್ರಪ್ಪ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಭಾಗವಹಿಸುವವರು: ಎಲ್‌.ಹನುಮಂತಯ್ಯ, ಎಂ.ಎಸ್‌.ಮೀನಾಕ್ಷಿ ಸುಂದರಂ, ಡಿ.ಎ.ವಿಜಯಭಾಸ್ಕರ್‌ ಮತ್ತು ಕೆ.ನೀಲಾ. ಅಧ್ಯಕ್ಷತೆ: ಡಾ.ಸಿದ್ದನಗೌಡ ಪಾಟೀಲ್‌.

ಸ್ಥಳ–ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಆವರಣ, ಮಹಾರಾಣಿ ಸೈನ್ಸ್‌ ಕಾಲೇಜು ಪಕ್ಕ, ಅರಮನೆ ರಸ್ತೆ, ಬೆಳಿಗ್ಗೆ 10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.