ADVERTISEMENT

ಬೆಂಗಳೂರು | ಜಪ್ತಿ ಮಾಡಿದ್ದ ಆಟೊ ಬಿಡುಗಡೆಗೆ ₹ 40 ಸಾವಿರ ಲಂಚ: ಎಎಸ್‌ಐ ಬಂಧನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 16:33 IST
Last Updated 4 ಜನವರಿ 2025, 16:33 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಜಪ್ತಿ ಮಾಡಿದ್ದ ಆಟೊ ಬಿಡುಗಡೆಗೆ ₹ 40 ಸಾವಿರ ಲಂಚ ಪಡೆದ ಸಂಜಯ ನಗರ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ (ಎಎಸ್‌ಐ) ಮತ್ತು ಮಧ್ಯವರ್ತಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಕೆ.ಜಿ.ಹಳ್ಳಿ ನಿವಾಸಿ ಮೊಹಮದ್ ಸುಜತ್‌ ಅವರ ಆಟೊವನ್ನು ಜಪ್ತಿ ಮಾಡಲಾಗಿತ್ತು. ಆಟೊ ಬಿಡುಗಡೆ ಮಾಡಲು ₹ 50 ಸಾವಿರಕ್ಕೆ ಬೇಡಿಕೆ ಇರಿಸಿದ್ದರು. ಈ ಸಂಬಂಧ ಮೊಹಮದ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. 

ಮಧ್ಯವರ್ತಿ ಸೈಯದ್ ರಿಜ್ವಾನ್‌ ಅವರ ಮೂಲಕ ₹ 40 ಸಾವಿರ ಹಣ ಪಡೆಯುವ ವೇಳೆ ಡಿವೈಎಸ್‌ಪಿ ನಾಗೇಶ್ ಹಸ್ಲಾರ್ ನೇತೃತ್ವದ ತಂಡ ದಾಳಿ ನಡೆಸಿ, ಹಣದ ಸಮೇತ ಎಎಸ್‌ಐ ಮತ್ತು ಮಧ್ಯವರ್ತಿಯನ್ನು ಬಂಧಿಸಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.