ADVERTISEMENT

ರಂಗಭೂಮಿ ಪ್ರೀಮಿಯರ್‌ ಲೀಗ್‌

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 20:51 IST
Last Updated 28 ಡಿಸೆಂಬರ್ 2020, 20:51 IST
ಸ್ಪರ್ಧಿಗಳೊಂದಿಗೆ ಪ್ರೊ.ಕೆ.ಆರ್. ವೇಣುಗೋಪಾಲ್, ಟಿ.ಎಸ್.ನಾಗಾಭರಣ ಮತ್ತು ಇತರ ಗಣ್ಯರು
ಸ್ಪರ್ಧಿಗಳೊಂದಿಗೆ ಪ್ರೊ.ಕೆ.ಆರ್. ವೇಣುಗೋಪಾಲ್, ಟಿ.ಎಸ್.ನಾಗಾಭರಣ ಮತ್ತು ಇತರ ಗಣ್ಯರು   

ಬೆಂಗಳೂರು: ರಂಗಭೂಮಿ ಕಲಾವಿದರಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಕ್ರಿಕೆಟ್‌ ಸ್ಪರ್ಧೆಯನ್ನು ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಉದ್ಘಾಟಿಸಿದರು.

‘ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಸ್ಪರ್ಧೆ ಆಯೋಜಿಸಲಾಗಿದೆ. ಪ್ರದರ್ಶನ ಕಲಾ ವಿಭಾಗದವರು ನೃತ್ಯ, ಸಂಗೀತ, ನಾಟಕ ಕಲೆಗಳ ಮೂಲಕ ಜನರ ಮನಸ್ಸಿಗೆ ಮುದ ನೀಡುತ್ತಾರೆ. ಈ ಕಲಾವಿದರು ಕ್ರಿಕೆಟ್‌ನಂತಹ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಒತ್ತಡ ಕಡಿಮೆ ಮಾಡಿಕೊಳ್ಳಬೇಕು’ ಎಂದು ಕುಲಪತಿ ಹೇಳಿದರು.

ಚಲನಚಿತ್ರ ಮತ್ತು ರಂಗಭೂಮಿ ನಿರ್ದೇಶಕ ಟಿ.ಎಸ್. ನಾಗಾಭರಣ ಮಾತನಾಡಿದರು. ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕೃಷ್ಣಸ್ವಾಮಿ, ಪ್ರದರ್ಶನ ಕಲಾವಿಭಾಗದ ಮುಖ್ಯಸ್ಥರಾದ ಡಾ‌.ಎಸ್.ಎನ್. ಸುಶೀಲಾ,ಪ್ರದರ್ಶನ ಕಲಾವಿಭಾಗದ ಹಿರಿಯ ವಿದ್ಯಾರ್ಥಿ ಹರ್ಷ ಭಾಗವಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.