ADVERTISEMENT

ದತ್ತಿ ಪ್ರಶಸ್ತಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 19:44 IST
Last Updated 11 ಡಿಸೆಂಬರ್ 2025, 19:44 IST
<div class="paragraphs"><p>ಪ್ರಾತಿನಿಧಿಕ ಪತ್ರ</p></div>

ಪ್ರಾತಿನಿಧಿಕ ಪತ್ರ

   

ಬೆಂಗಳೂರು: ವಾಗ್ದೇವಿ ಟ್ರಸ್ಟ್‌ ನೀಡುವ ಡಾ. ಶಾಂತಾ ರಾಧಾಕೃಷ್ಣ ದತ್ತಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. 

ADVERTISEMENT

ವೃತ್ತಿಪರ ಶಿಕ್ಷಣ, ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವ ಶ್ರವಣದೋಷವುಳ್ಳ ವಿದ್ಯಾರ್ಥಿಗಳು, ಶ್ರವಣ ನ್ಯೂನತೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ವಾಕ್ ಶ್ರವಣ ತಜ್ಞರು, ವಿಶೇಷ ಶಿಕ್ಷಕರು ಡಿ. 20ರೊಳಗೆ vagdevitrust@gmail.com ಇ–ಮೇಲ್‌ ಮೂಲಕ ಅರ್ಜಿ ಸಲ್ಲಿಸಬಹುದು ಎಂದು
ಪ್ರಕಟಣೆ ತಿಳಿಸಿದೆ.

ಕಾವ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಬೆಂಗಳೂರು: ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರತಿಭಾ ನಂದಕುಮಾರ್ ಕಾವ್ಯ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ. 

‘ಕವನ ಸಂಕಲನವು ಅಂಧ ಬರಹಗಾರರ ಸ್ವರಚಿತ ಅಥವಾ ಸಂಪಾದಿತ ಕೃತಿಯಾಗಿರಬೇಕು. ಇತರೆ ಭಾಷೆಗಳಿಂದ ಅನುವಾದಿಸಿರುವ ಕೃತಿಗಳನ್ನು ಪರಿಗಣಿಸಲಾಗುತ್ತದೆ. 2025ರಲ್ಲಿ ಕವನ ಸಂಕಲನಗಳು ಲಭ್ಯವಾಗದ ಸಂದರ್ಭದಲ್ಲಿ 2024ರ ಪ್ರಕಟಗೊಂಡ ಕೃತಿಗಳನ್ನು ಪರಿಗಣಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಅಖಿಲ ಕರ್ನಾಟಕ ಅಂಧರ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ₹10 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಆಸಕ್ತರು ಇದೇ 20ರೊಳಗೆ ಕೃತಿಗಳನ್ನು ಕಳುಹಿಸಬೇಕು’ ಎಂದು ಪರಿಷತ್ತಿನ ಅಧ್ಯಕ್ಷ ಮುದಿಗೆರೆ ರಮೇಶ್‌ ಕುಮಾರ್ ತಿಳಿಸಿದ್ದಾರೆ. 

ವಿಳಾಸ: ಮಮತಾ ಜಿ. ಸಾಗರ್‌, ಡೋರ್‌ ನಂಬರ್‌–619, 7ನೇ ಕ್ರಾಸ್‌, ಒಂದನೇ ಮೇನ್‌, ನಾಲ್ಕನೇ ಹಂತ ಬಿಇಎಂಎಲ್‌, ಆರ್‌.ಆರ್‌. ನಗರ ಬೆಂಗಳೂರು–98.
ಮಾಹಿತಿಗೆ: 98447 69007–

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.