ADVERTISEMENT

ಕ್ಯಾನ್ಸರ್ | ಮನೋಸಾಮಾಜಿಕ ಆರೈಕೆ ಅಗತ್ಯ: ತಜ್ಞರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 15:31 IST
Last Updated 25 ಏಪ್ರಿಲ್ 2025, 15:31 IST
<div class="paragraphs"><p>ಕ್ಯಾನ್ಸರ್</p></div>

ಕ್ಯಾನ್ಸರ್

   

(ಐಸ್ಟೋಕ್ ಚಿತ್ರ)

ಬೆಂಗಳೂರು: ‘ಕ್ಯಾನ್ಸರ್ ಪೀಡಿತರು ಮಾನಸಿಕವಾಗಿ ಕುಗ್ಗಿರುತ್ತಾರೆ. ಆದ್ದರಿಂದ ಕ್ಯಾನ್ಸರ್ ಪೀಡಿತರಿಗೆ ಮನೋಸಾಮಾಜಿಕ ಆರೈಕೆ ಅಗತ್ಯ’ ಎಂದು ಕ್ಯಾನ್ಸರ್ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು. 

ADVERTISEMENT

ವಿಶ್ವ ಸೈಕೋ-ಆಂಕಾಲಜಿ ದಿನದ ಪ್ರಯುಕ್ತ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ (ಎಚ್‌ಸಿಜಿ) ಮತ್ತು ಸೆಂಟರ್ ಆಫ್ ಸೈಕೋ-ಆಂಕಾಲಜಿ ಫಾರ್ ಎಜುಕೇಶನ್ ಆ್ಯಂಡ್ ರಿಸರ್ಚ್ ಸಂಸ್ಥೆ ಹಮ್ಮಿಕೊಂಡಿದ್ದ ದುಂಡುಮೇಜಿನ ಸಭೆಯಲ್ಲಿ ಮನೋಸಾಮಾಜಿಕ ಆರೈಕೆಯ ಅಗತ್ಯದ ಬಗ್ಗೆ ಚರ್ಚಿಸಲಾಯಿತು. ಕ್ಯಾನ್ಸರ್ ತಜ್ಞರು, ಮನೋವೈದ್ಯಕೀಯ ತಜ್ಞರು, ವಕೀಲರು, ನೀತಿ ನಿರೂಪಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಕ್ಯಾನ್ಸರ್ ಪೀಡಿತರಿಗೆ ಮನೋಸಾಮಾಜಿಕ ಆರೈಕೆ ಅಗತ್ಯವಿದೆ. ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರು ಮಾನಸಿಕವಾಗಿ ಕುಗ್ಗಿರುತ್ತಾರೆ. ಅವರಿಗೆ ಮನೋವೈದ್ಯಕೀಯ ಬೆಂಬಲ ಒದಗಿಸಬೇಕಾಗುತ್ತದೆ. ಚಿಕಿತ್ಸೆಗೆ ಸಂಬಂಧಿಸಿದಂತೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ’ ಎಂದು ಹೇಳಿದರು. 

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶ ಡಾ. ನವೀನ್ ಟಿ., ‘ಆಂಕಾಲಜಿ ತರಬೇತಿಯು ಮಾನಸಿಕ ಆರೈಕೆಯನ್ನು ಒಳಗೊಂಡಿರಬೇಕು. ಈ ತರಬೇತಿಯನ್ನು ವೈದ್ಯರ ಜತೆಗೆ ಶುಶ್ರೂಷಕರಿಗೂ ನೀಡಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.