ADVERTISEMENT

ಡಿಸಿಪಿ ಕಾಲ ಮೇಲೆ ಹರಿದ ಕಾರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 19:06 IST
Last Updated 27 ಸೆಪ್ಟೆಂಬರ್ 2021, 19:06 IST
   

ಬೆಂಗಳೂರು: ಗೊರಗುಂಟೆಪಾಳ್ಯ ಬಳಿ ಭದ್ರತೆ ಕರ್ತವ್ಯದಲ್ಲಿದ್ದ ಉತ್ತರ ವಿಭಾಗದಡಿಸಿಪಿಧರ್ಮೇಂದ್ರ ಕುಮಾರ ಮೀನಾ ಅವರ ಕಾಲಿನಮೇಲೆರೈತ ಮುಖಂಡನ ಕಾರಿನ ಚಕ್ರಹರಿದಘಟನೆ ಸೋಮವಾರ ನಡೆಯಿತು.

ತುಮಕೂರು ರಸ್ತೆ ಕಡೆಯಿಂದ ಬೆಂಗಳೂರು ಪ್ರವೇಶಿಸುವ ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಗೊರಗುಂಟೆಪಾಳ್ಯ ಬಳಿ ಸೇರಿದ್ದರು. ಭದ್ರತೆ ಉಸ್ತುವಾರಿಯನ್ನುಡಿಸಿಪಿನೋಡಿಕೊಳ್ಳುತ್ತಿದ್ದರು.

‘ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ’ ಎಂಬ ಫಲಕವಿದ್ದ ಎಸ್‌ಯುವಿಕಾರು(ಕೆಎ 19 ಎಂಕೆ 1565) ಸ್ಥಳಕ್ಕೆ ಬಂದಿತ್ತು.ಡಿಸಿಪಿಹಾಗೂ ಸಿಬ್ಬಂದಿ ಅದನ್ನು ತಡೆಯಲು ಮುಂದಾಗಿದ್ದರು. ಆದರೆ, ಚಾಲಕಕಾರುನಿಲ್ಲಿಸಲಿಲ್ಲ.

ADVERTISEMENT

ಡಿಸಿಪಿಧರ್ಮೇಂದ್ರಕುಮಾರ್ ಮೀನಾ ಅವರ ಮೇಲೆಯೇಕಾರುಹರಿಸಲು ಚಾಲಕ ಯತ್ನಿಸಿದ್ದ.ಡಿಸಿಪಿಪಕ್ಕಕ್ಕೆ ಸರಿಯುತ್ತಿದ್ದಂತೆ, ಅವರ ಎಡಗಾಲಿನ ಪಾದದ ಮೇಲೆಯೇ ಕಾರಿನ ಮುಂದಿನ ಚಕ್ರ ಹರಿದು ಹೋಯಿತು. ಗಾಯಗೊಂಡಡಿಸಿಪಿಸ್ಥಳದಲ್ಲೇ ಕುಳಿತು ಚೇತರಿಸಿಕೊಂಡರು. ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡರು. ನಂತರ, ಕುಂಟುತ್ತಲೇ ಯಥಾಪ್ರಕಾರ ಕರ್ತವ್ಯ ಮುಂದುವರಿಸಿದರು.

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಚಾಲಕನ್ನು ವಶಕ್ಕೆ ಪಡೆದಿದ್ದಾರೆ.ಕಾರುಜಪ್ತಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.