ಬೆಳ್ಳಂದೂರು ಕೆರೆ
ಬೆಂಗಳೂರು: ಬೆಳ್ಳಂದೂರು ಕೆರೆಗೆ ಗುರುವಾರ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಉರುಳಿದ್ದು, ಕಾರಿನಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಯುವಕರಿಬ್ಬರು ಯಮಲೂರಿನಿಂದ ಮಾರತ್‌ಹಳ್ಳಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬೆಳ್ಳಂದೂರು ಸಮೀಪ ಕಾರು ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಕೆರೆಗೆ ಉರುಳಿದೆ. ಕಾರಿನಲ್ಲಿದ್ದ ಯುವಕರು ಬಾಗಿಲು ತೆರೆದು ಹೊರಗೆ ಬಂದು ಅಪಾಯದಿಂದ ಪಾರಾದರು.
ಸಂಚಾರ ಪೊಲೀಸರು ಹಾಗೂ ಬಿಬಿಎಂಪಿ ಮಾರ್ಷಲ್‌ಗಳು ಕ್ರೇನ್ ಸಹಾಯದಿಂದ ಕಾರನ್ನು ಕೆರೆಯಿಂದ ಹೊರಕ್ಕೆ ತಂದರು.
ಸರಣಿ ಅಪಘಾತ: ಯಲಹಂಕದ ಮೇಲ್ಸೇತುವೆಯಲ್ಲಿ ಗುರುವಾರ ಬೆಳಿಗ್ಗೆ ಸರಣಿ ಅಪಘಾತ ಸಂಭವಿಸಿದ್ದು, ಏಳು ಕಾರುಗಳಿಗೆ ಹಾನಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಳಿಗ್ಗೆ ಮಳೆ ಬರುತ್ತಿದ್ದಾಗ ಮೇಲ್ಸೇತುವೆಯಲ್ಲಿ ಕಾರುಗಳು ಚಲಿಸುತ್ತಿದ್ದವು. ಕಾರೊಂದು ನಿಯಂತ್ರಣ ತಪ್ಪಿ, ಮತ್ತೊಂದು ವಾಹನ ಕಾರಿಗೆ ಡಿಕ್ಕಿಯಾಗಿದೆ. ಹಿಂದೆ ಇದ್ದ ಕಾರುಗಳು ಒಂದರ ಹಿಂದೆ ಒಂದು ಡಿಕ್ಕಿಯಾದವು. ಒಂದು ಕಾರಿನಲ್ಲಿದ್ದ ಮಗುವಿಗೆ ಸಣ್ಣ ಗಾಯವಾಗಿದೆ. ಸರಣಿ ಅಪಘಾತದಿಂದಾಗಿ ಸಂಚಾರಕ್ಕೆ ತೊಡಕಾಗಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.