ADVERTISEMENT

ವ್ಯಂಗ್ಯಚಿತ್ರಗಳ ಮೊನಚು ಉಳಿಯಲಿ: ಪತ್ರಕರ್ತ ಜಿ.ಎನ್. ಮೋಹನ್

ವ್ಯಂಗ್ಯಚಿತ್ರಕಾರರ ವಾರ್ಷಿಕ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಜಿ.ಎನ್. ಮೋಹನ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 23:49 IST
Last Updated 8 ಫೆಬ್ರುವರಿ 2026, 23:49 IST
ವಾರ್ಷಿಕ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಜಿ. ಎನ್. ಮೋಹನ್ ಚಿತ್ರ ಬಿಡಿಸಿದರು
ವಾರ್ಷಿಕ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಜಿ. ಎನ್. ಮೋಹನ್ ಚಿತ್ರ ಬಿಡಿಸಿದರು   

ಬೆಂಗಳೂರು: ಜನರ ಸಂಪಾದಕೀಯ ಎಂದೇ ಬಣ್ಣಿಸಲ್ಪಟ್ಟಿದ್ದ ವ್ಯಂಗ್ಯಚಿತ್ರಗಳು ಮೊನಚು ಕಳೆದುಕೊಳ್ಳುತ್ತಿವೆ ಎಂದು ಪತ್ರಕರ್ತ ಜಿ.ಎನ್. ಮೋಹನ್ ವಿಷಾದಿಸಿದರು.

ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವ್ಯಂಗ್ಯಚಿತ್ರ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವ್ಯಂಗ್ಯಚಿತ್ರಗಳು ಜನಸಾಮಾನ್ಯರ ಮನಸ್ಸನ್ನು ಬಿಂಬಿಸುವ ಕನ್ನಡಿಯಾದ ಕಾರಣದಿಂದಲೇ ಅದನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಆಳುವ ವರ್ಗ ಸದಾ ಯತ್ನಿಸುತ್ತಲೇ ಇರುತ್ತದೆ. ಈಗಾಗಲೇ ವ್ಯಂಗ್ಯಚಿತ್ರಗಳನ್ನು ಕೇವಲ ಚಿತ್ರವಾಗಿಸುವ ಹುನ್ನಾರ ನಡೆದಿದೆ ಎಂದರು.

ADVERTISEMENT

ಇಂದು ವ್ಯಂಗ್ಯಚಿತ್ರಗಳನ್ನು ಬಿಟ್ಟ ಜಾಗವನ್ನು ತುಂಬುವ ಪದಾರ್ಥದಂತೆ ಬಳಸಲಾಗುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.

ಪ್ರದರ್ಶನವನ್ನು ಉದ್ಘಾಟಿಸಿದ ವ್ಯಂಗ್ಯಚಿತ್ರಕಾರ ಬಿ.ವಿ. ಪಾಂಡುರಂಗ ರಾವ್ ಅವರು ವ್ಯಂಗ್ಯಚಿತ್ರಕಾರರ ಸಂಘ ನಡೆದು ಬಂದ ಹಾದಿಯನ್ನು ನೆನಪು ಮಾಡಿಕೊಂಡರು.

ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಯುವ ತಲೆಮಾರು ಹೆಚ್ಚಿನ ಆಸಕ್ತಿ ವಹಿಸಲು ಸಾಧ್ಯವಾಗುವಂತೆ ವ್ಯಂಗ್ಯಚಿತ್ರ ಪ್ರದರ್ಶನ, ಸಂಕಿರಣ, ಕಮ್ಮಟಗಳನ್ನು ಆಯೋಜಿಸಲಾಗುವುದು’ ಎಂದರು.

ಹಿರಿಯ ವ್ಯಂಗ್ಯ ಚಿತ್ರಕಾರರಾದ ಬಿ.ಜಿ. ಗುಜ್ಜಾರಪ್ಪ, ವಿ.ಆರ್. ಸಿ ಶೇಖರ್, ರಾಮಧ್ಯಾನಿ, ಎಚ್.ಬಿ. ಮಂಜುನಾಥ್. ಜೇಮ್ಸ್ ವಾಜ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಸ್. ನಾಗನಾಥ್, ಸಂಕೇತ ಗುರುದತ್ತ, ಎಂ. ವಿಶ್ವನಾಥ್ ಉಪಸ್ಥಿತರಿದ್ದರು.

ವ್ಯಂಗ್ಯಚಿತ್ರ ಪ್ರದರ್ಶನವು ಫೆ.9ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.