ADVERTISEMENT

ಅಕ್ರಮ ‘ಡ್ಯಾನ್ಸ್ ಬಾರ್’; 78 ಯುವತಿಯರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 3:02 IST
Last Updated 29 ಏಪ್ರಿಲ್ 2019, 3:02 IST
   

ಬೆಂಗಳೂರು: ಪರವಾನಗಿ ನಿಯಮ ಉಲ್ಲಂಘಿಸಿ ‘ಡ್ಯಾನ್ಸ್ ಬಾರ್‌’ ನಡೆಸುತ್ತಿದ್ದ ‘ಬ್ರಿಗೇಡ್ ನೈಟ್’ ಹಾಗೂ ‘ನೈಟ್ ಕ್ವೀನ್’ ಬಾರ್ ಆ್ಯಂಡ್ ರೆಸ್ಟೊರಂಟ್‌ಗಳ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದ ಸಿಸಿಬಿ ಪೊಲೀಸರು, 78 ಯುವತಿಯರನ್ನು ರಕ್ಷಿಸಿದ್ದಾರೆ.

‘ಬ್ರಿಗೇಡ್‌ ರಸ್ತೆ ಬಳಿಯ ‘ಬ್ರಿಗೇಡ್ ನೈಟ್’ ಹಾಗೂ ಕಲಾಸಿಪಾಳ್ಯದ ‘ನೈಟ್ ಕ್ವೀನ್’ ಬಾರ್ ಆ್ಯಂಡ್ ರೆಸ್ಟೊರಂಟ್‌ಗಳಲ್ಲಿ ಯುವತಿಯರಿಂದ ಡ್ಯಾನ್ಸ್‌ ಮಾಡಿಸಲಾಗುತ್ತಿತ್ತು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಲಾಯಿತು’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಬ್ರಿಗೇಡ್ ನೈಟ್‌’ನ ವ್ಯವಸ್ಥಾಪಕ ಅಶೋಕ ಶೆಟ್ಟಿ, ಕ್ಯಾಷಿಯರ್ ಸಚಿನ್ ಹಾಗೂ ‘ನೈಟ್ ಕ್ವೀನ್’ನ ಪಿ. ಮೋಹನ್‌ ಎಂಬುವರನ್ನು ಬಂಧಿಸಲಾಗಿದೆ. ದಾಳಿ ವೇಳೆ 100 ಗ್ರಾಹಕರನ್ನು ವಶಕ್ಕೆ ಪಡೆಯಲಾಗಿದೆ. ₹ 4.25 ಲಕ್ಷ ನಗದು, 12 ಧ್ವನಿವರ್ಧಕ, ಒಂದು ಕಂಪ್ಯೂಟರ್ ಹಾಗೂ ಡಿ.ಜೆ ಮಿಕ್ಸರ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.