ADVERTISEMENT

‘ಬೈ ಚಾನ್ಸ್’ ಮೇಲೆ ಸಿಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 19:46 IST
Last Updated 25 ಆಗಸ್ಟ್ 2019, 19:46 IST
‘ಬೈ ಚಾನ್ಸ್’ ಬಾರ್ ಆ್ಯಂಡ್ ರೆಸ್ಟೊರೆಂಟ್‌ನ ದೃಶ್ಯ (ಸಂಗ್ರಹ ಚಿತ್ರ)
‘ಬೈ ಚಾನ್ಸ್’ ಬಾರ್ ಆ್ಯಂಡ್ ರೆಸ್ಟೊರೆಂಟ್‌ನ ದೃಶ್ಯ (ಸಂಗ್ರಹ ಚಿತ್ರ)   

ಬೆಂಗಳೂರು: ಬ್ರಿಗೇಡ್ ರಸ್ತೆಯಲ್ಲಿರುವ ‘ಬೈ ಚಾನ್ಸ್’ ಬಾರ್ ಆ್ಯಂಡ್ ರೆಸ್ಟೊರೆಂಟ್ ಮೇಲೆ ಶನಿವಾರ ರಾತ್ರಿ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಡಿ.ಜೆ ಸಂಗೀತ ಬಳಸುತ್ತಿದ್ದ ಆರೋಪದಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್‌ನ ನಿವಾಸಿ ಕೆ.ಆರ್. ರಾಜಣ್ಣ (58) ಹಾಗೂ ಲಿಂಗರಾಜಪುರದ ಜೇಮ್ಸ್ ಜಾನ್ (44) ವಶಕ್ಕೆ ಪಡೆದವರು.

‘ಬಾರ್ ಆ್ಯಂಡ್ ರೆಸ್ಟೊರೆಂಟ್ ನಡೆಸಲು ಪರವಾನಗಿ ಪಡೆದಿದ್ದ ಆರೋಪಿಗಳು, ಅಕ್ರಮವಾಗಿ ಡಿ.ಜೆ ಮೂಲಕ ಸಂಗೀತ ಬಳಕೆ ಮಾಡುತ್ತಿದ್ದರು. ಗ್ರಾಹಕರಿಂದಲೂ ನೃತ್ಯ ಮಾಡಿಸುತ್ತಿದ್ದರು. ದಾಳಿ ವೇಳೆ ಸಂಗೀತ ಪರಿಕರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಕ್ಲಬ್‌ ಮೇಲೆ ದಾಳಿ: ಜೆ.ಬಿ. ನಗರ ಸಮೀಪದ ಬಿಇಎಂಎಲ್‌ನ ಅನ್ನಪೂರ್ಣೇಶ್ವರಿ ಕಾಂಪ್ಲೆಕ್ಸ್‌ನಲ್ಲಿರುವ ನ್ಯೂ ಗೋಲ್ಡನ್ ಲಕ್ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಜೂಜಾಟದಲ್ಲಿ ತೊಡಗಿದ್ದ 22 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

‘ಸದಸ್ಯರಲ್ಲದ ವ್ಯಕ್ತಿಗಳು ಕ್ಲಬ್‌ಗೆ ಬಂದು, ಹಣವನ್ನು ಪಣಕ್ಕಿಟ್ಟು ಜೂಜು ಆಡುತ್ತಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕ್ಲಬ್‌ ಮೇಲೆ ದಾಳಿ ನಡೆಸಿ ₹ 1.42 ಲಕ್ಷ ಜಪ್ತಿ ಮಾಡಲಾಯಿತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.