ADVERTISEMENT

ಸ್ಪಾ ಮೇಲೆ ದಾಳಿ: ಯುವತಿಯರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 22:12 IST
Last Updated 19 ಫೆಬ್ರುವರಿ 2020, 22:12 IST

ಬೆಂಗಳೂರು: ಅಕ್ರಮ ಚಟುವಟಿಕೆ ಹಿನ್ನೆಲೆಯಲ್ಲಿ ಕೋರಮಂಗಲದ ಕೆಬಿಎಚ್‌ ಕಾಲೊನಿಯಲ್ಲಿರುವ ಜಾಕ್ ಸೆಲೂನ್ ಆ್ಯಂಡ್ ವೆಲ್‍ನೆಸ್ ಸ್ಪಾ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಆರು ಯುವತಿಯರನ್ನು ರಕ್ಷಿಸಿದ್ದಾರೆ.

ದಾಳಿ ವೇಳೆ ಸ್ಪಾ ಮಾಲೀಕ ಅರವಿಂದ ಮತ್ತು ರೂಪೇಶ್‌ ಎಂಬವರು ಪರಾರಿಯಾಗಿದ್ದು, ಮೊನಾಲಿ ಘೋಷ್‌ (33) ಎಂಬವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಂಧಿತರಿಂದ ₹ 5 ಸಾವಿರ ನಗದು, ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ.

ಸ್ಪಾಗೆ ಬರುವ ಗಿರಾಕಿಗಳಿಂದ ₹ 3 ಸಾವಿರದಿಂದ ₹ 4 ಸಾವಿರವರೆಗೆ ಹಣ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಕೋರಮಂಗಲ ಬಳಿಯ ಈಜೀಪುರದಲ್ಲಿ ‘ಬಾಡಿ ಟು ಬಾಡಿ’ ಮಸಾಜ್ ಹೆಸರನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪಾರ್ಲರ್ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಇಬ್ಬರನ್ನು ಬಂಧಿಸಿದ್ದರು. ಸ್ಪಾ ಹೆಸರಲ್ಲಿ ಗಿರಾಕಿಗಳನ್ನು ದಂಧೆಯಲ್ಲಿ ತೊಡಗಿಸಿಕೊಳ್ಳುವಂತೆ ಆರೋಪಿಗಳು ಪ್ರಚೋದಿಸುತ್ತಿದ್ದರು.

‘ಉದ್ಯೋಗ ದೊರಕಿಸಿಕೊಡುವ ಆಮಿಷ ಒಡ್ಡಿ, ಬೇರೆ ಬೇರೆ ರಾಜ್ಯಗಳಿಂದ ಯುವತಿಯರನ್ನು ಕರೆದುಕೊಂಡು ಬರುತ್ತಿದ್ದ ಆರೋಪಿಗಳು, ಹಣದ ಆಸೆ ತೋರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಹ್ಯಾಪಿ ಎಂಡಿಂಗ್, ಬಾಡಿ ಟು ಬಾಡಿ ಮಸಾಜ್ ಹೆಸರಲ್ಲಿ ಗ್ರಾಹಕರಿಗೆ ಆಹ್ವಾನ ನೀಡುತ್ತಿರುವುದು ದಾಳಿ ವೇಳೆ ಬಯಲಿಗೆ ಬಂದಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.