ಸೈಲೆನ್ಸರ್‌ನ ಮಫ್ಲರ್ ತೆಗೆದು ಬೆಂಕಿ ಉಗುಳುವಂತೆ ಮಾರ್ಪಾಡು ಮಾಡಿದ್ದ ಕಾರನ್ನು ಕಬ್ಬನ್‌ಪಾರ್ಕ್ ಸಂಚಾರ ಠಾಣೆಯ ಪೊಲೀಸರು ಪತ್ತೆ ಮಾಡಿದ್ದಾರೆ. ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು: ಸೈಲೆನ್ಸರ್‌ನ ಮಫ್ಲರ್ ತೆಗೆದು ಬೆಂಕಿ ಉಗುಳುವಂತೆ ಮಾರ್ಪಾಡು ಮಾಡಿದ್ದ ಕಾರನ್ನು ಕಬ್ಬನ್‌ಪಾರ್ಕ್ ಸಂಚಾರ ಠಾಣೆಯ ಪೊಲೀಸರು ಪತ್ತೆ ಮಾಡಿದ್ದಾರೆ. ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.
ಶನಿವಾರ ಸಂಜೆ ಕಾರನ್ನು ಚರ್ಚ್‌ಸ್ಟ್ರೀಟ್‌ನಲ್ಲಿ ನಿಲ್ಲಿಸಿಕೊಂಡು, ಕರ್ಕಶ ಶಬ್ದ ಮಾಡುತ್ತಿದ್ದ ದೃಶ್ಯ ಕಂಡುಬಂದಿತ್ತು. ಈ ಮಾರ್ಗದಲ್ಲಿ ತೆರಳುತ್ತಿದ್ದ ಪಾದಚಾರಿಗಳು, ಅಂಗಡಿ–ಕಚೇರಿಗಳ ಸಿಬ್ಬಂದಿ ಕಾರಿನ ಶಬ್ದಕ್ಕೆ ಬೆಚ್ಚಿ ಬಿದ್ದಿದ್ದರು. ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಫೋಕ್ಸ್‌ವ್ಯಾಗನ್ ಪೋಲೊ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ಬೆಂಕಿ ಉಗುಳಿಸುತ್ತಿದ್ದ ದೃಶ್ಯವುಳ್ಳ ವಿಡಿಯೊ ತುಣುಕನ್ನು ‘ಪ್ರಜಾವಾಣಿ’ಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಅದನ್ನು ಆಧರಿಸಿ ಸಂಚಾರ ವಿಭಾಗದ ಪೊಲೀಸರು ಕಾರನ್ನು ಪತ್ತೆಮಾಡಿ, ಪ್ರಕರಣ ದಾಖಲಿಸಿದ್ದಾರೆ.
‘ಕೆ.ಆರ್.ಪುರದ ಪಂಜು ಶೆಣೈ ಹೆಸರಿನಲ್ಲಿ ಕಾರು ನೋಂದಣಿಯಾಗಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.