ADVERTISEMENT

ದೇಶ ಕಟ್ಟಲು ಯುವಕರ ಶ್ರಮ ಅಗತ್ಯ: ಗಿರೀಶ್ ಚಂದ್ರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 20:19 IST
Last Updated 23 ಆಗಸ್ಟ್ 2025, 20:19 IST
ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು. ಎಂ. ಗಿರೀಶ್ ಚಂದ್ರ, ಕೆ.ಆರ್. ಪರಮಹಂಸ, ಕೆ. ಗೀತಾ ಪರಮಹಂಸ, ಎಸ್. ಕರುಣಾಕರ, ಸೌಮ್ಯ ಉಪಸ್ಥಿತರಿದ್ದರು
ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು. ಎಂ. ಗಿರೀಶ್ ಚಂದ್ರ, ಕೆ.ಆರ್. ಪರಮಹಂಸ, ಕೆ. ಗೀತಾ ಪರಮಹಂಸ, ಎಸ್. ಕರುಣಾಕರ, ಸೌಮ್ಯ ಉಪಸ್ಥಿತರಿದ್ದರು    

ಬೆಂಗಳೂರು: ‘ದೇಶದ ಭವಿಷ್ಯ ಯುವಜನರ ಕೈಯಲ್ಲಿದ್ದು, ದೇಶ ಕಟ್ಟಲು ನಿಜವಾದ ಎಂಜಿನಿಯರ್‌ಗಳ ಅಗತ್ಯವಿದೆ’ ಎಂದು ಟಾಟಾ ರಿಸರ್ಚ್‌, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ನ (ಟಿಸಿಎಸ್‌) ಮುಖ್ಯ ವಿಜ್ಞಾನಿ ಎಂ. ಗಿರೀಶ್ ಚಂದ್ರ ಅಭಿಮತ ವ್ಯಕ್ತಪಡಿಸಿದರು. 

ಕನಕಪುರ ರಸ್ತೆಯಲಿರುವ ಸಿಟಿ ಎಂಜಿನಿಯರಿಂಗ್ ಕಾಲೇಜು ಶನಿವಾರ ಹಮ್ಮಿಕೊಂಡಿದ್ದ ಘಟಿಕೋತ್ಸವ ಸಮಾರಂಭದಲ್ಲಿ 250 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ವೇಳೆ ಘಟಿಕೋತ್ಸವ ಭಾಷಣ ಮಾಡಿದ ಅವರು, ‘ವಿದ್ಯಾರ್ಥಿಗಳಿಗೆ ಜ್ಞಾನ ಆಧಾರಿತ ಶಿಕ್ಷಣ ನೀಡಬೇಕು. ಎಂಜಿನಿಯ‌ರಿಂಗ್, ವಿಜ್ಞಾನ, ಗಣಿತ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಜ್ಞಾನ ಆಧರಿತ ಶಿಕ್ಷಣದ ಜತೆಗೆ ಕಾಲ್ಪನಿಕತೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದರು.

‘ಕಲಿಕೆ ನಿರಂತರವಾದ ಪ್ರಕ್ರಿಯೆಯಾಗಿದೆ. ಶಿಕ್ಷಣ ಸಂಸ್ಥೆಗಳಿಂದ ಹೊರ ಬರುತ್ತಿರುವ ಪದವೀಧರರು, ಕಂಪನಿಗಳ ನಿರೀಕ್ಷೆಯನ್ನು ಪೂರೈಸುತ್ತಿಲ್ಲ. ಹೀಗಾಗಿ, ಅವರಿಗೆ ಹೆಚ್ಚಿನ ಕೌಶಲ ಮತ್ತು ತರಬೇತಿ ನೀಡಬೇಕಿದೆ’ ಎಂದು ಹೇಳಿದರು. 

ADVERTISEMENT

ಎಎಂಸಿ, ಸಿಟಿ, ಕೇಂಬ್ರಿಜ್ ಮತ್ತು ಬ್ರೂಕ್ಲಿನ್ ಸಂಸ್ಥೆಗಳ ಅಧ್ಯಕ್ಷ ಕೆ.ಆರ್. ಪರಮಹಂಸ, ಉಪಾಧ್ಯಕ್ಷೆ ಕೆ. ಗೀತಾ ಪರಮಹಂಸ, ಕಾಲೇಜಿನ ಪ್ರಾಂಶುಪಾಲ ಎಸ್. ಕರುಣಾಕರ ಮತ್ತು ಮುಖ್ಯಸ್ಥೆ ಸೌಮ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.