ADVERTISEMENT

9ನೇ ತರಗತಿ ಬಾಲಕಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 19:53 IST
Last Updated 1 ಫೆಬ್ರುವರಿ 2022, 19:53 IST

ಬೆಂಗಳೂರು: ನಗರದ ಪಶ್ಚಿಮ ವಿಭಾಗ ವ್ಯಾಪ್ತಿಯಲ್ಲಿ 15 ವರ್ಷದ ಬಾಲಕಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

‘ನಗರದ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ಬಾಲಕಿ ಓದುತ್ತಿದ್ದಳು. ಪೋಷಕರ ಜೊತೆ ವಾಸವಿದ್ದಳು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬಾಲಕಿ ಹೆಸರು ಬಹಿರಂಗಪಡಿಸದಂತೆ ಪೋಷಕರು ಕೋರಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಶಾಲೆಯ ಆನ್‌ಲೈನ್‌ ತರಗತಿ ಇರುವುದಾಗಿ ಹೇಳಿದ್ದ ಬಾಲಕಿ, ಮನೆ ಕೊಠಡಿಯೊಳಗೆ ಹೋಗಿದ್ದಳು. ಕೆಲ ಗಂಟೆಗಳ ನಂತರ, ತಿಂಡಿ ತಿನ್ನಲೆಂದು ತಾಯಿ ಕೂಗಿದರೂ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡ ತಾಯಿ, ಕಿಟಕಿಯಲ್ಲಿ ನೋಡಿದಾಗ ಮೃತದೇಹ ಕಂಡಿತ್ತು’ ಎಂದೂ ತಿಳಿಸಿವೆ.

ADVERTISEMENT

‘ಸ್ಥಳಕ್ಕೆ ಹೋದ ಹೊಯ್ಸಳ ಸಿಬ್ಬಂದಿ, ಬಾಗಿಲು ತೆರೆದು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಪೋಷಕರು ನೀಡಿರುವ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ‘ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.