ADVERTISEMENT

ಬೆಂಗಳೂರು: ಪಾದಚಾರಿ ಮಾರ್ಗ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2024, 15:36 IST
Last Updated 7 ಡಿಸೆಂಬರ್ 2024, 15:36 IST
ಮಹದೇವಪುರ ವಲಯದಲ್ಲಿ ಪಾದಚಾರಿ ಮಾರ್ಗದಲ್ಲಿ ಶೆಡ್‌ಗಳನ್ನು ತೆರವು ಮಾಡಲಾಯಿತು
ಮಹದೇವಪುರ ವಲಯದಲ್ಲಿ ಪಾದಚಾರಿ ಮಾರ್ಗದಲ್ಲಿ ಶೆಡ್‌ಗಳನ್ನು ತೆರವು ಮಾಡಲಾಯಿತು   

ಬೆಂಗಳೂರು: ಬಿಬಿಎಂಪಿಯ ದಕ್ಷಿಣ, ರಾಜರಾಜೇಶ್ವರಿ ನಗರ ಹಾಗೂ ಮಹದೇವಪುರ ವಲಯಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಶನಿವಾರ ನಡೆಯಿತು.

ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರ ನಿರ್ದೇಶನದಂತೆ ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಗಳನ್ನು ತೆರವು ಮಾಡಲಾಯಿತು. ಪಾದಚಾರಿ ಮಾರ್ಗಗಳಲ್ಲಿ ಶಾಶ್ವತ ಪೆಟ್ಟಿಗೆಗಳನ್ನು ತೆರವು ಮಾಡಿ, ಮತ್ತೆ ವ್ಯಾಪಾರ ಮಾಡದಂತೆ ಕಟ್ಟೆಚ್ಚರ ನೀಡಲಾಗುತ್ತಿದೆ.

ದಕ್ಷಿಣ ವಲಯದ ಜಯನಗರ 1ನೇ ಬ್ಲಾಕ್ 3ನೇ ಅಡ್ಡರಸ್ತೆ, ಲಕ್ಕಸಂದ್ರ ವಾರ್ಡಿನ 16ನೇ ಅಡ್ಡರಸ್ತೆ, ರಾಜರಾಜೇಶ್ವರಿ ನಗರ ವಲಯದ ನಾಗರಭಾವಿ 2ನೇ ಹಂತದ 6ನೇ ಅಡ್ಡರಸ್ತೆ, ಮಹದೇವಪುರ ವಲಯದ ಹಳೆ ವಿಮಾನನಿಲ್ದಾಣ ರಸ್ತೆ ಮಾರತ್‌ಹಳ್ಳಿ ಸೇತುವೆ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ADVERTISEMENT

ಹಳೆ ವಿಮಾನನಿಲ್ದಾಣ ರಸ್ತೆ ಮಾರತ್‌ಹಳ್ಳಿ ಸೇತುವೆ ಮುಖ್ಯರಸ್ತೆಯಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಓವರ್ ಹೆಡ್ ಕೇಬಲ್‌ಗಳನ್ನು ತೆರವುಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.