ADVERTISEMENT

ಸಾಮೂಹಿಕ ಬದ್ದತೆಯಿಂದ ಶಾಂತಿ ಸ್ಥಾ‍‍ಪನೆ: ಕರ್ನಲ್ ಕೆ.ಎಂ. ಹರಿಕೃಷ್ಣ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 16:13 IST
Last Updated 1 ಡಿಸೆಂಬರ್ 2025, 16:13 IST
ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ನಾನಾ ದೇಶಗಳ ತಜ್ಞರು ಭಾಗಿಯಾಗಿದ್ದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ನಾನಾ ದೇಶಗಳ ತಜ್ಞರು ಭಾಗಿಯಾಗಿದ್ದರು.   

ಬೆಂಗಳೂರು: ‘ಆಧುನಿಕ ಕಾಲದಲ್ಲಿ ಇಡೀ ಜಗತ್ತಿಗೆ ಶಾಂತಿ ಬಹಳ ಮುಖ್ಯ ಎಂದು ಹೇಳುವುದಷ್ಟೇ ನಮ್ಮ ಕೆಲಸವಲ್ಲ. ಅದೊಂದು ಸಾಮೂಹಿಕ ಬದ್ಧತೆಯಾಗಿ ಕಾರ್ಯರೂಪಕ್ಕೆ ಬರಬೇಕು’ ಭಾರತೀಯ ಸೇನೆಯ ವೈದ್ಯ ಕರ್ನಲ್ ಕೆ.ಎಂ. ಹರಿಕೃಷ್ಣ ಹೇಳಿದರು.

ನಗರದ ಮನಮೋಹನ ಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಭಾಷೆಗಳ ಕೇಂದ್ರವು ಆಯೋಜಿಸಿದ್ದ ಎರಡು ದಿನಗಳ ‘ಭಾಷೆ, ಸಂಸ್ಕೃತಿ ಮತ್ತು ವಿಶ್ವ ಶಾಂತಿ: ಶಾಂತಿಯುತ ಜಗತ್ತಿಗೆ ಸಂವಾದ’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಗ್ಲೋಬಲ್ ಸ್ಕೂಲ್ ಗ್ರೂಪ್‌ನ ಶೈಕ್ಷಣಿಕ ಮುಖ್ಯಸ್ಥ ಎನ್. ನಾಗರಾಜನ್ ಮಾತನಾಡಿ, ‘ಶಾಂತಿ ಎನ್ನುವುದು ಐಷಾರಾಮಿತನದಿಂದ ಬರುವಂತದ್ದಲ್ಲ. ಮನುಷ್ಯರು ಹಾಗೂ ದೇಶಗಳ ನಡುವಿನ ಸಂಭಾಷಣೆಯಲ್ಲಿ ಶಾಂತಿ ನೆಲೆಯೂರಬೇಕು. ಗೌರವಯುತ ಸಂವಹನ ಪ್ರತಿ ರಾಷ್ಟ್ರಗಳ ನಡುವೆ ಸೇತುವೆಯಾಗಬೇಕು’ ಎಂದು ಹೇಳಿದರು.

ADVERTISEMENT

ಜಾಗತಿಕ ಭಾಷೆಗಳ ಕೇಂದ್ರದ ನಿರ್ದೇಶಕಿ ಜ್ಯೋತಿ ವೆಂಕಟೇಶ್ ಮತ್ತು ಅಧ್ಯಾಪಕರಾದ ಶ್ರಾವ್ಯ ಮೌಳಿ ಸಮ್ಮೇಳನದ ವರದಿ ಮಂಡಿಸಿದರು. 

ಜಪಾನ್‌, ಇಂಗ್ಲೆಂಡ್‌ ಸೇರಿದಂತೆ ವಿವಿಧ ರಾಷ್ಟ್ರಗಳ ವಿಶ್ವವಿದ್ಯಾಲಯಗಳು, ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿ‌ಸಿದ್ದ ಸಮ್ಮೇಳನದಲ್ಲಿ ಭಾಷೆ, ಸಂಸ್ಕೃತಿ ಮತ್ತು ಶಾಂತಿ ನಡುವಿನ ಸಂಬಂಧಗಳ ಹಲವು ಆಯಾಮಗಳ ಕುರಿತು ದೇಶ, ವಿದೇಶಗಳ ಭಾಷಾ ತಜ್ಞರು, ಶಾಂತಿದೂತರು, ಸಂಶೋಧಕರು, ಪರಿಣಿತರು ಚರ್ಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.