ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮಂಗಳವಾರ ಬೆಳಿಗ್ಗೆ ಕುಕ್ಕರ್ ಸ್ಫೋಟಗೊಂಡು, ಶಾರ್ಟ್ ಸರ್ಕಿಟ್ ಆಗಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ.
ದೆಹಲಿಯ ಮೋಸಿನ್ (23) ಹಾಗೂ ಖಾದರ್ ಖಾನ್(27) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಜೆ.ಪಿ.ನಗರದ ಹೇರ್ ಸಲೂನ್‌ನಲ್ಲಿ ಮೋಸಿನ್ ಹಾಗೂ ಖಾದರ್ ಖಾನ್ ಕೆಲಸ ಮಾಡಿಕೊಂಡಿದ್ದರು. ಮಂಗಳವಾರ ರಜೆಯಿತ್ತು. ಬೆಳಿಗ್ಗೆ ತಡವಾಗಿ ಎದ್ದು, 11ರ ಸುಮಾರಿಗೆ ಕುಕ್ಕರ್‌ನಲ್ಲಿ ಅನ್ನ ಮಾಡಲು ಅಕ್ಕಿ ಇಟ್ಟಿದ್ದರು. ಆಗ ಕುಕ್ಕರ್ ಸ್ಪೋಟಗೊಂಡಿತು. ಇದೇ ವೇಳೆ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿತು. ಇದರಿಂದ ಇಬ್ಬರು ಗಾಯಗೊಂಡರು. ಆದರೆ, ಸಿಲಿಂಡರ್ ಸ್ಪೋಟಗೊಂಡಿಲ್ಲ ಎಂದು ಪೊಲೀಸರು ಹೇಳಿದರು.
ಬೆಚ್ಚಿಬಿದ್ದ ಅಕ್ಕಪಕ್ಕದ ನಿವಾಸಿಗಳು: ಕುಕ್ಕರ್ ಸ್ಫೋಟ ಆಗುತ್ತಿದ್ದಂತೆಯೇ ಜೋರು ಶಬ್ದ ಉಂಟಾಗಿತ್ತು. ಇದರಿಂದ ಅಕ್ಕಪಕ್ಕದ ನಿವಾಸಿಗಳು ಬೆಚ್ಚಿಬಿದ್ದರು. ಅದಾದ ಮೇಲೆ ಸ್ಥಳೀಯರು ಬಂದು ನೋಡಿ, ಯುವಕರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.