ADVERTISEMENT

ಕೋವಿಡ್‌ ಚಿಕಿತ್ಸೆಗಾಗಿ ಅಲೆದಾಟ; ನಿವೃತ್ತ ಎಎಸ್‌ಐ ಸಾವು

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 21:48 IST
Last Updated 3 ಜುಲೈ 2020, 21:48 IST
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಉಸಿರಾಟ ತೊಂದರೆ ಹಾಗೂ ತೀವ್ರ ಜ್ವರದಿಂದ ಬಳಲುತ್ತ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದ ನಿವೃತ್ತ ಎಎಸ್‌ಐಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ.

ಕೋರಮಂಗಲದಲ್ಲಿ ನೆಲೆಸಿದ್ದ ಅವರಿಗೆ ಮೂರು ದಿನಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೆಬ್ಬಾಳದಲ್ಲಿ ವೈದ್ಯರೊಬ್ಬರ ಬಳಿ ತಪಾಸಣೆ ಮಾಡಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದ್ದರು.

ಚಿಕಿತ್ಸೆಗೆಂದು ವಿಲ್ಸನ್ ಗಾರ್ಡನ್ ಬಳಿಯ ಆಸ್ಪತ್ರೆಯೊಂದಕ್ಕೆ ತೆರಳಿದ್ದರು. ಹಣ ಪಾವತಿಸಿಕೊಂಡು ಗಂಟಲಿನ ದ್ರವ ಸಂಗ್ರಹಿಸಿದ್ದ ಆಸ್ಪತ್ರೆಯವರು, ಹೆಚ್ಚಿನ ಚಿಕಿತ್ಸೆಗೆ ವೆಂಟಿಲೇಟರ್ ಇಲ್ಲವೆಂದು ಹೇಳಿ ವಾಪಸು ಕಳುಹಿಸಿದ್ದರು. ನಂತರ ಅವರು ನಾಲ್ಕು ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಎಲ್ಲಿಯೂ ಬೆಡ್‌ ಸಿಕ್ಕಿರಲಿಲ್ಲ.

ADVERTISEMENT

ಬಿಎಂಟಿಸಿ: 53 ಸಿಬ್ಬಂದಿಗೆ ಸೋಂಕು
ಬೆಂಗಳೂರು: ಕೊರೊನಾ ಸೋಂಕಿಗೆ ತುತ್ತಾಗುತ್ತಿರುವ ಬಿಎಂಟಿಸಿ ನೌಕರರ ಸಂಖ್ಯೆ ಶುಕ್ರವಾರ 53ಕ್ಕೆ ಮುಟ್ಟಿದೆ.

‘ಈ ಪೈಕಿ 17 ಸಿಬ್ಬಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ’ ಎಂದು ಬಿಎಂಟಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.