ಬೆಂಗಳೂರು: ‘ಕೋವಿಡ್– 19 ಹರಡದಂತೆ ರಾಜ್ಯ ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಹಣಕಾಸಿನ ಕೊರತೆ ಇಲ್ಲ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದರು.
ಕೋವಿಡ್– 19 ಕುರಿತು ವಿಧಾನಪರಿಷತ್‌ನಲ್ಲಿಸೋಮವಾರನಡೆದ ಚರ್ಚೆಗೆಉತ್ತರಿಸಿದ ಅವರು, ‘ಮುನ್ನೆಚ್ಚರಿಕೆಕ್ರಮ ವಹಿಸಲು ₹36 ಕೋಟಿ ವೆಚ್ಚ ಮಾಡಿದ್ದೇವೆ. ಕೇಂದ್ರದ ನೆರವೂ ಪಡೆಯುತ್ತೇವೆ’ ಎಂದು ಅವರು ಹೇಳಿದರು.
‘ಕನಿಷ್ಠ ಮೂರು ತಿಂಗಳಿಗೆ ಸಾಕಾಗುವಷ್ಟು ಮಾಸ್ಕ್‌ಗಳು ಲಭ್ಯವಿದ್ದು, ಜೆನರಿಕ್ ಔಷಧಾಲಯಗಳಲ್ಲಿ ಸಿಗುತ್ತಿದೆ. ಕಾಳಸಂತೆಯಲ್ಲಿ ಮಾಸ್ಕ್
ಮಾರಾಟ ಮಾಡುವವರ ಮತ್ತು ಬಳಸಿದ ಮಾಸ್ಕ್ ಸ್ವಚ್ಛಗೊಳಿಸಿ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಶ್ರೀರಾಮುಲು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.