ADVERTISEMENT

ಕಟ್ಟಡ ನಿರ್ಮಾಣ ಸಂಸ್ಥೆ ವಿರುದ್ಧ ನೂರಾರು ವಲಸೆ ಕಾರ್ಮಿಕರ ಕೂಡಿ‌ ಹಾಕಿದ‌ ಆರೋಪ

ಊರಿಗೆ ಕಳುಹಿಸಿಕೊಡುವಂತೆ ಪೊಲೀಸರ ಬಳಿ ಅಂಗಾಲಾಚಿದ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 12 ಮೇ 2020, 6:21 IST
Last Updated 12 ಮೇ 2020, 6:21 IST
   

ಬೆಂಗಳೂರು: ಲಾಕ್‌ಡೌನ್ ಇದ್ದರೂ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬನಹಳ್ಳಿ ಬಳಿ ನೂರಾರು ವಲಸೆ ಕಾರ್ಮಿಕರನ್ನು ಕೆ.ಆರ್.ಪುರದ ಪ್ರತಿಷ್ಠಿತ ಸುಮಧುರಾ ಕಟ್ಟಡ ನಿರ್ಮಾಣ ಸಂಸ್ಥೆ ಒಂದೇ ಕಡೆ ಕೂಡಿ‌ ಹಾಕಿರುವ ಆರೋಪ ಕೇಳಿಬಂದಿದೆ.

ಸಂಸ್ಥೆಯು ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿದೆ. ಅಲ್ಲದೆ, ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಜರ್ ನೀಡಿಲ್ಲ.‌ ಅಂತರವೂ ಇಲ್ಲದೆ ಸಂಸ್ಥೆಯ ಮಾಲೀಕರು ಕಾರ್ಮಿಕರನ್ನು ಕೂಡಿ ಹಾಕಿದ್ದಾರೆ ಎನ್ನಲಾಗಿದೆ.

ಊಟದ ವಿಚಾರದಲ್ಲಿ ಜಗಳ ನಡೆದಿದ್ದು, ಭದ್ರತಾ ಸಿಬ್ಬಂದಿ ಕಾರ್ಮಿಕರನ್ನು ಥಳಿಸಿದ್ದಾರೆ ಎಂದೂ ಹೇಳಲಾಗಿದೆ. ಕಾಡುಗೋಡಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ, ತಮ್ಮನ್ನು ತಮ್ಮ ರಾಜ್ಯಕ್ಕೆ ಕಳುಹಿಸಿ ಕೊಡುವಂತೆ ಪೊಲೀಸರ ಬಳಿ ಕಾರ್ಮಿಕರು ಅಂಗಲಾಚಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.