ADVERTISEMENT

ಕೋವಿಡ್‌ ಯೋಧರ ಓಡಾಟಕ್ಕೆ ‘ಬೌನ್ಸ್‌’ ನೆರವು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 14:42 IST
Last Updated 29 ಏಪ್ರಿಲ್ 2020, 14:42 IST
   

ಬೆಂಗಳೂರು: ಕೋವಿಡ್‌–19 ಯೋಧರಓಡಾಟಕ್ಕೆ ನೆರವಾಗಲು ‘ಬೌನ್ಸ್‌’ ಬಾಡಿಗೆ ಬೈಕ್‌ಗಳ ಸಂಸ್ಥೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸ್ಕೂಟರ್‌ ಹೀರೋ ಸೇವೆಯನ್ನು ಅದು ಆರಂಭಿಸಿದೆ.

ಯಾರು ಬೇಕಾದರೂ scooterhero.bounceshare.com ನಲ್ಲಿ ಸೈನ್‌ ಅಪ್ ಆಗಿ, ತಮ್ಮ ದ್ವಿಚಕ್ರ ವಾಹನಗಳನ್ನು ಕೋವಿಡ್- 19 ವಾರಿಯರ್‌ಗಳ ಬಳಕೆಗೆ ಒದಗಿಸಬಹುದು.

ಜನ ತಮ್ಮ ಬೈಕ್, ಸ್ಕೂಟರ್‌ಗಳನ್ನು ‘ಸ್ಕೂಟರ್‌ಹೀರೋ’ ಪಟ್ಟಿಗೆ ಸೇರಿಸಿ, ಹಂಚಿಕೊಳ್ಳುವ ಅವಕಾಶವನ್ನು ಬೌನ್ಸ್ ಒದಗಿಸಿದೆ. ಈ ಪಟ್ಟಿಗೆ ಸೇರಿಸುವ ಪ್ರತಿಯೊಬ್ಬರು ತಮ್ಮ ಬೈಕನ್ನು ಉಚಿತವಾಗಿ ಬಳಕೆಗೆ ಕೊಡುವ ಇಲ್ಲವೆ ದಿನಕ್ಕೆ ₹80ಶುಲ್ಕ ವಿಧಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಇದರಿಂದ, ಆರ್ಥಿಕವಾಗಿ ಕುಗ್ಗಿರುವ ಸಾವಿರಾರು ಮಂದಿಗೆ, ಸುಮ್ಮನೆ ನಿಂತಿರುವ ತಮ್ಮ ವಾಹನದಿಂದ ಸ್ವಲ್ಪ ಹಣಗಳಿಸಲು ನೆರವಾಗಬಹುದು. ಅಲ್ಲದೆ, ಕೋವಿಡ್‌–19 ಯೋಧರಿಗೂ ಓಡಾಡಲು ಸಹಾಯವಾಗಬಹುದು ಎಂದು ಕಂಪನಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.